ಕೆ.ಆರ್.ಸಾಗರ: ಕೃಷ್ಣರಾಜಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾರ್ತ್ ಬ್ಯಾಂಕ್ ಗ್ರಾಮದ ಬಳಿ ಇರುವ ವಿ.ಸಿ.ನಾಲೆಯಲ್ಲಿ ಸೋಮವಾರ ಈಜಲು ಹೋದ 19 ವರ್ಷ ಆನಂದ ನಾಪತ್ತೆಯಾಗಿದ್ದಾನೆ. ಮದ್ದೂರು ಮೂಲದ ನಿವಾಸಿಯಾಗಿರುವ ಆನಂದ ವೃತ್ತಿಯಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ತನ್ನ ಕುಟುಂಬ ಸಮೇತವಾಗಿ ನಾರ್ತ್‌ಬ್ಯಾಂಕ್ ಬಳಿ ಬಂದಿದ್ದ ಸಂದರ್ಭದಲ್ಲಿ ಪೂರ್ಣ ಮಟ್ಟದಲ್ಲಿ ಹರಿಯುತ್ತಿದ್ದ ವಿ.ಸಿ.ನಾಲೆಯಲ್ಲಿ ಈಜಲು ಹೋದಾಗ ಈ ಘಟನೆ ನಡೆದಿದೆ ಎಂದು ನಾಪತ್ತೆಯಾಗಿರುವ ಆನಂದನ ಪತ್ನಿ ಶಶಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾಳೆ. ಮಾಹಿತಿ ಮೇರೆಗೆ ಪೋಲಿಸರು ಸ್ಥಳಕ್ಕೆ ಧಾವಿಸಿ ಅಗ್ನಿ ಶಾಮಕ ದಳ ಸಿಬ್ಬಂದಿ ಕರೆಸಿ ಹುಡುಕಾಟ ನಡೆಸಲಾಗಿದೆ. ಪ್ರಕರಣ ದಾಖಲಾಗಿಲ್ಲ.