ಜಿಲ್ಲೆ

ನಾಪತ್ತೆಯಾಗಿದ್ದ ಭಿನ್ನ ಕೋಮಿನ ಜೋಡಿ ಪತ್ತೆ

Udupi

ಉಡುಪಿ: ನಾಪತ್ತೆಯಾಗಿದ್ದ ಪೆರ್ಡೂರಿನ ಅಪ್ರಾಪ್ತ ಹರೆಯದ ಯುವತಿಯನ್ನು ಅನ್ಯಕೋಮಿನ ಯುವಕನೊಂದಿಗೆ ಗುರುವಾರ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬಾಲಕಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು, ಇಬ್ಬರೂ ಅಪ್ರಾಪ್ತರಾಗಿರುವ ಕಾರಣ ಶುಕ್ರವಾರ ಬಾಲ ನ್ಯಾಯಾಧಿಕರಣ ಮಂಡಳಿಮುಂದೆ ಹಾಜರು ಪಡಿಸಲಾಗುತ್ತದೆ. ಪ್ರಥಮ ಪದವಿಯಲ್ಲಿ ಓದುತ್ತಿರುವ ಯುವತಿಯು ಅ.28ರಂದು ಬೆಳಗ್ಗೆ ಸ್ಕಾಲರ್‌ಶಿಪ್‌ಗೆ ಅರ್ಜಿ ನೀಡಲು ಕಾಲೇಜಿಗೆಂದು ಮನೆಯಿಂದ ಹೋದವಳು ನಾಪತ್ತೆಯಾಗಿದ್ದಳು.

ಅಂದು ಮಧ್ಯಾಹ್ನ ಮೂರು ಗಂಟೆ ನಂತರ ಯುವತಿಯ ಮೊಬೈಲ್ ಫೋನ್ ಸ್ವಿಚ್ಡ್‌ಆಫ್ ಆಗಿತ್ತು. ಪೆರ್ಡೂರಿನ ಅನ್ಯಕೋಮಿನ ಯುವಕನೊಬ್ಬ ಮಗಳನ್ನು ಅಪರಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಹಿರಿಯಡ್ಕ ಠಾಣೆಗೆ ದೂರು ನೀಡಿದ್ದರು. ವಿದ್ಯಾರ್ಥಿನಿಯನ್ನು ಶೀಘ್ರ ಪತ್ತೆ ಹಚ್ಚಬೇಕು ಎಂದು ಹಿಂದು ಒತ್ತಾಯಿಸಿ ಹಿಂದು ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದ್ದರು.