ಜಿಲ್ಲೆ

ಮಲೆಬೆಟ್ಟು ಯುವತಿ ನಾಪತ್ತೆ

ಸೌಮ್ಯ ಆರ್

ಬೆಳ್ತಂಗಡಿ: ಕೊಯ್ಯರು ಮಲೆಬೆಟ್ಟು ನಿವಾಸಿ, ಬಿ.ಸಿ.ರೋಡಿನ ಕಾರಿಂಜದ ಮಹಮ್ಮದ್ ಸಲೀಂ ಎಂಬುವರ ಪತ್ನಿ ರಝೀನ(24) ನಾಪತ್ತೆಯಾಗಿದ್ದಾರೆ. ರಝೀನ ಅವರ 2 ವರ್ಷದ ಪುತ್ರ 40 ದಿನಗಳ ಹಿಂದೆ ಮೃತಪಟ್ಟಿದ್ದರು. ಬಳಿಕ ಕೊಯ್ಯೂರಿನ ತಾಯಿ ಮನೆಯಲ್ಲಿದ್ದ ರಝೀನ ಜೂನ್ 22ರಂದು ಸಂಜೆ 4ಕ್ಕೆ ಗಂಡನ ಮನೆಗೆ ಹೋಗುತ್ತೇನೆಂದು ಹೇಳಿ ಹೋಗಿದ್ದು, ಬಳಿಕ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ರಝೀನ ಮನೆಯವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರು ಕನ್ನಡ, ತುಳು, ಬ್ಯಾರಿ ಭಾಷೆ ಬಲ್ಲವರಾಗಿದ್ದಾರೆ. ಇವರ ಸುಳಿವು ಸಿಕ್ಕಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.