ಜಿಲ್ಲೆ

ಬಾಲಕರಿಬ್ಬರು ನಾಪತ್ತೆ, ಅಪಹರಣ ಶಂಕೆ

Udupi

ಉಡುಪಿ: ನಗರದ ಸಿಟಿ ನಿಲ್ದಾಣದ ಬಳಿ ಡಿ.3ರಂದು ಆಡುತ್ತಿದ್ದ ಇಬ್ಬರು ಬಾಲಕರು ನಾಪತ್ತೆಯಾಗಿದ್ದು, ಅಪಹರಣಕ್ಕೆ ಒಳಗಾಗಿರಬಹುದೆಂದು ಶಂಕಿಸಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಚಿಕ್ಕಪೇಟೆಯ ನಿವಾಸಿ ನಾಗರಾಜ ಎಂಬುವರ ಮಗ ಸಂತೋಷ (11) ಹಾಗೂ ನಾಗರಾಜ ಅವರ ಪತ್ನಿಯ ತಂಗಿ ಮಂಗಳಾ ಎಂಬುವರ ಎಂಬವರ ಪುತ್ರ ವಿಷ್ಣು (9) ನಾಪತ್ತೆಯಾಗಿದ್ದಾರೆ.

ಸಂತೋಷ್‌ಗೆ ಶಾಲೆಗೆ ರಜೆ ಇದ್ದ ಕಾರಣ ಮಂಗಳಾ ಜತೆಗೆ ಉಡುಪಿಗೆ ಬಂದಿದ್ದನು. ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ಆಡುತ್ತಿದ್ದ ಸಂತೋಷ್ ಹಾಗೂ ವಿಷ್ಣು ನಾಪತ್ತೆಯಾಗಿದ್ದು, ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.

ಈ ಇಬ್ಬರು ಬಾಲಕರನ್ನು ದುಷ್ಕರ್ಮಿಗಳು ಪುಸಲಾಯಿಸಿ ಕರೆದುಕೊಂಡು ಹೋಗಿರಬಹುದು ಅಥವಾ ಕಿಡ್ನಾೃಪ್ ಮಾಡಿರಬಹುದು ಎಂದು ದೂರು ನೀಡಲಾಗಿದೆ. ಈ ಬಗ್ಗೆ ನಾಗರಾಜ ಎಂಬುವರು ಡಿ. 7ರಂದು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಮಹಿಳಾ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಲ್ಲಿವರೆಗೆ ಬಾಲಕರು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.