ಸುಂಟಿಕೊಪ್ಪ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೂವರೆ ವರ್ಷದ ಹೆಣ್ಣು ಮಗುವಿನೊಂದಿಗೆ ಮಹಿಳೆ ನಾಪತ್ತೆಯಾಗಿದ್ದಾಳೆ. ಸುಂಟಿಕೊಪ್ಪ ಹೋಬಳಿಯ ಅಂದಗೋವೆ ಗ್ರಾಮದಲ್ಲಿ ಧರ್ಮರಾಜ್ ಅವರ ಲೈನ್‌ಮನೆಯಲ್ಲಿ ವಾಸವಾಗಿದ್ದ ಎಚ್.ಆರ್.ಅಣ್ಣಪ್ಪ ಅವರ ಪತ್ನಿ ಲಕ್ಷ್ಮೀ ವೈ.ಸಿ. ಮತ್ತು ಮಗು ಅನುಶ್ರೀ ಅ.12ರಿಂದ ನಾಪತ್ತೆಯಾಗಿದ್ದಾರೆ ಎಂದು ಪತಿ ಅಣ್ಣಪ್ಪ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಮಹಿಳೆ ಮತ್ತು ಮಗು ಕಂಡು ಬಂದಲ್ಲಿ ಸುಂಟಿಕೊಪ್ಪ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.