ಲಿಂಗಸುಗೂರಿನ ಬಸವಸಾಗರ ಸರ್ಕಲ್‌ನಲ್ಲಿ ಪೂರ್ವದಿಕ್ಕಿಗೆ ಅಳವಡಿಸಿದ ನಾಮಫಲಕ. 
ಜಿಲ್ಲೆ

ತಪ್ಪು ಮಾಹಿತಿ ನೀಡುತ್ತಿರುವ ಮಾರ್ಗಸೂಚಿಗಳು

ಗಾಯತ್ರಿ ಮಾಲಿಪಾಟೀಲ್

ಲಿಂಗಸುಗೂರು: ದಾರಿ ತೋರಿಸುವ ನಾಮಫಲಕಗಳೇ ತಪ್ಪು ಮಾಹಿತಿ ನೀಡಿದರೆ ಹೇಗೆ? ಇಂಥ ಅವಾಂತರಕ್ಕೆ ಪಟ್ಟಣದ ಬಸವಸಾಗರ ಸರ್ಕಲ್‌ನಲ್ಲಿ ಅಳವಡಿಸಿದ ಮಾರ್ಗಸೂಚಿಗಳೇ ಸಾಕ್ಷಿಯಾಗಿವೆ. ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150 ರಸ್ತೆಗೆ ಅಳವಡಿಸಿರುವ ನಾಮಫಲಕ ಕಮಾನುಗಳು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿವೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಈ ಪ್ರಮಾದ ನಡೆದಿದೆ.

ಬಸವಸಾಗರ ವೃತ್ತದಲ್ಲಿ ಅಳವಡಿಸಿದ ಉತ್ತರ ದಿಕ್ಕಿನ ಕಲಬುರಗಿ ರಸ್ತೆ ನಾಮಫಲಕದಲ್ಲಿ ನಾರಾಯಣಪುರ ಡ್ಯಾಂ 25ಕಿಮೀ ಅಂತರದಲ್ಲಿದೆ ಎಂದು ತೋರಿಸುತ್ತದೆ. ಪೂರ್ವದಿಕ್ಕಿನ ನಾಮಫಲಕದಲ್ಲಿ 22ಕಿಮೀ ಎಂದು ತೋರಿಸುತ್ತದೆ. ಇದಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಲಿಂಗಸುಗೂರಿನಿಂದ ನಾರಾಯಣಪುರ ಡ್ಯಾಂ ಕೃಷ್ಣಾ ನದಿ ಸೇತುವೆ ವರೆಗೆ 24.5ಕಿಮೀ ಇದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಕಾಶ ತಿಳಿಸಿದ್ದಾರೆ. ಆದರೆ, ಹೆದ್ದಾರಿ ಅಧಿಕಾರಿಗಳು ಹೇಗೆ ಅಂತರ ಗುರುತಿಸಿದ್ದಾರೆಂದು ತಿಳಿಯುತ್ತಿಲ್ಲ.