ಸರ ಕಳ್ಳತನ ಮಾಡಿ ಎಸ್ಕೇಪ್​ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದು. 
ಜಿಲ್ಲೆ

ಮಹಿಳೆಯ ಚಿನ್ನದ ಸರ ಕದ್ದು ದುಷ್ಕರ್ಮಿಗಳು ಪರಾರಿ

ದೊಡ್ಡಬಳ್ಳಾಪುರ : ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಸರ ಕಳ್ಳರ ಹಾವಳಿ ಮತ್ತೆ ಮುಂದುವರಿದಿದೆ. ಮಾರಸಂದ್ರ ಅಪಾಟ್ಮೆಂರ್ಟ್​ ಬಳಿ ದಂಪತಿ ಬೈಕ್​ನಲ್ಲಿ ಹೋಗುವಾಗ ಹಿಂದಿನಿಂದ ಮತ್ತೊಂದು ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಕೊರಳಲ್ಲಿದ್ದ 45 ಗ್ರಾಂ. ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ದೊಡ್ಡಬಳ್ಳಾಪುರ ನಗರದ ಕಲ್ಲುಪೇಟೆ ನಿವಾಸಿಗಳಾದ ರಮೇಶ್​ ದಂಪತಿ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ರಾಜಾನುಕುಂಟೆ ಬಳಿ ಆಸ್ಪತ್ರೆಗೆ ಹೋಗಿ ವಾಪಾಸ್​ ದೊಡ್ಡಬಳ್ಳಾಪುರದ ಕಡೆ ಬರುವಾಗ ನಂಬರ್​ ಪ್ಲೇಟ್​ ಇಲ್ಲದ ಬೈಕ್​ನಲ್ಲಿ ಇಬ್ಬರು ದುಷ್ಕರ್ಮಿಗಳು ಮುಖಕ್ಕೆ ಮಾಸ್ಕ್​ ಹಾಗೂ ಹೆಲ್ಮೆಟ್​ ಧರಿಸಿಕೊಂಡು ಬಂದು ದಂಪತಿ ಬೈಕ್​ ಹಿಂಬಾಲಿಸಿಕೊಂಡು ಬಂದು ಹಿಂಬದಿ ಕುಳಿತಿದ್ದ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಎಳೆದು ದೊಡ್ಡಬಳ್ಳಾಪುರದ ಕಡೆಗೆ ಪರಾರಿಯಾಗಿದ್ದಾರೆ. ರಾಜಾನುಕುಂಟೆ ಠಾಣೆಯಲ್ಲಿ ದೂರು ದಾಖಲಾಗಿದೆ.