ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತು ತಂಡದ ಸಹಕಾರದಿಂದಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅವ್ಯವಹಾರ ನಡೆದಿದೆ. ಈ ಅವ್ಯವಹಾರದ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.
ಮುಡಾದಲ್ಲಿ ಸುಮಾರು 5,000 ಕೋಟಿ ರೂ. ಅವ್ಯವಹಾರ ನಡೆದಿದೆ ಎನ್ನಲಾಗಿದ್ದು, ಇದಕ್ಕೆ ಡಾ.ಯತೀಂದ್ರ ಸಿದ್ದರಾಮಯ್ಯ ಸಹಕಾರ ನೀಡಿದ್ದಾರೆ. ಮುಡಾ ಅವ್ಯವಹಾರ ವಿಚಾರವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು. ಎಸ್‌ಐಟಿಯಿಂದ ಪಾರದರ್ಶಕವಾಗಿ ತನಿಖೆ ನಡೆಸಲು ಆಗುವುದಿಲ್ಲ. ಏಕೆಂದರೆ ಅದು ರಾಜ್ಯ ಸರ್ಕಾರದ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಅಲ್ಲದೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ ಮೇಲೆ ಅಕ್ರಮದ ವಿಚಾರ ಒಂದೊಂದಾಗಿ ಹೊರಬರುತ್ತ್ತಿದೆ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಮೇಲ್ನೋಟಕ್ಕೆೆ ತಪ್ಪ್ಪಿತಸ್ಥರು ಎಂದು ಕಂಡುಬಂದವರನ್ನು ಅವರು ಯಾರೇ ಆಗಿರಲಿ ತಕ್ಷಣವೇ ಬಂಧಿಸಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮುಡಾದ ಬಗ್ಗೆೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಳ ಕಾಳಜಿ ಇತ್ತು. ಬದ್ಧತೆಯನ್ನು ಹೊಂದಿದ್ದರು. ಈಗ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆೆ ಅವರಿಗೆ ಗೊತ್ತಿದೇಯೋ ಅಥವಾ ಗೊತ್ತಿಲ್ಲವೋ ತಿಳಿಯುತ್ತಿಲ್ಲ. ಆದರೆ ಅವರ ಹೆಸರನ್ನು ಬಳಸಿಕೊಂಡು ದೊಡ್ಡ ಮಟ್ಟದ ದರೋಡೆ ಮಾಡುತ್ತಿದ್ದಾರೆ ಎಂದು ಅರೋಪಿಸಿದರು.
ಡಾ.ಯತೀಂದ್ರ ಸಿದ್ದರಾಮಯ್ಯಬುದ್ಧಿವಂತನೋ, ಮಂಗನೋ ಒಂದು ಗೊತ್ತ್ತಾಗುತ್ತ್ತಿಲ್ಲ. ಆತನನ್ನು ಮುಂದೆ ಇಟ್ಟುಕೊಂಡು ದಂಧೆ ಮಾಡಲಾಗುತ್ತಿದೆ. ಇದಕ್ಕೆೆ ಜನಪ್ರತಿನಿಧಿಗಳು-ಅಧಿಕಾರಿಗಳು ಸಿಂಡಿಕೇಟ್‌ವೊಂದನ್ನು ರಚಿಸಿಕೊಂಡಿದ್ದಾರೆ. ಇದರ ಮೂಲಕ ಅವ್ಯವಹಾರ ನಡೆಸಿದ್ದಾರೆ. ಇದರಲ್ಲಿ ಮುಡಾ ಆಯುಕ್ತ ದಿನೇಶ್ ಕುಮಾರ್, ಶಾಸಕ ಕೆ.ಹರೀಶ್‌ಗೌಡ, ರಾಕೇಶ್ ಪಾಪಣ್ಣ, ಮುಡಾ ಅಧ್ಯಕ್ಷ ಕೆ.ಮರೀಗೌಡ, ಹಿಂದಿನ ಅಧ್ಯಕ್ಷ ರಾಜೀವ್, ಆಯುಕ್ತ ನಟೇಶ್, ಮರಿತಿಬ್ಬೇಗೌಡರ ಸಂಬಂಧಿ ಸುದೀಪ್, ದಲ್ಲಾಳಿಗಳಾದ ಉತ್ತಮಗೌಡ, ಮೋಹನ್, ಮುಡಾ ಕಮೀಷನರ್ ಬಾಮೈದ ತೇಜಸ್‌ಗೌಡ, ರೆಕಾರ್ಡ್ ರೂಂ ಅಧಿಕಾರಿ ತ್ರಿಶೂಲ್ ಮತ್ತಿತರು ಭಾಗಿಯಾಗಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ಅವ್ಯವಹಾರದ ವಿಚಾರ ಹೊರಗೆ ಬರುತ್ತ್ತಿರುತ್ತಿದ್ದಂತೆ ಭಾನುವಾರವಾದರೂ ಅಧಿಕಾರಿಗಳು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅಣತಿ ಮೇರೆಗೆ ಮುಡಾದ ಕಡತಗಳನ್ನು ದೊಡ್ಡ-ದೊಡ್ಡ ಸೂಟ್‌ಕೇಸ್‌ಗಳಲ್ಲಿ ಬೆಂಗಳೂರಿಗೆ ತಗೆದುಕೊಂಡು ಹೋಗಿದ್ದಾರೆ. ಅಲ್ಲಿ ಏನು-ಏನನ್ನು ಸರಿಮಾಡುತ್ತಾರೋ ನೋಡಬೇಕು. ರಿಯಲ್‌ಎಸ್ಟೇಟ್ ನಡೆಸುತ್ತಿದ್ದವನಿಗೆ ತಮ್ಮ ಶಿಷ್ಯ ಎನ್ನುವ ಕಾರಣಕ್ಕ್ಕಾಗಿ ಸಿದ್ದರಾಮಯ್ಯ ನಗರಾಭಿವೃದ್ಧಿ ಖಾತೆ ಕೊಟ್ಟರೆ, ಆತ ಎಲ್ಲವನ್ನೂ ಕುಲಗೆಡಿಸಿ ಬಿಟ್ಟಿದ್ದಾನೆ. ಮುಡಾದ ಕಮೀಷನರ್ ಅಧ್ಯಕ್ಷರಿಗಿಂತ ಹೆಚ್ಚು ಸಚಿವರ ಜತೆ ನೇರ ಸಂಪರ್ಕದಲ್ಲಿ ಇರುತ್ತಾರೆ. ಮುಡಾ ದಲ್ಲಾಳಿಗಳ, ಏಜೆಂಟರ ಅಡ್ಡೆೆಯಾಗಿ ಪರಿವರ್ತನೆಯಾಗಿದೆ. ಅಲ್ಲಿ ಜನರ ಹಿತಚಿಂತನೆ ಇಲ್ಲವಾಗಿದೆ. ಸಂಪುಟ ದರ್ಜೆಯ ಸಚಿವರು ಎಂದರೆ ಸರ್ಕಾರ. ಆದ್ದರಿಂದ ಸರ್ಕಾರವೇ ಈ ಅವ್ಯವಹಾರದಲ್ಲಿ ಮುಳುಗಿಹೋಗಿದೆ ಎಂದು ಆರೋಪಿಸಿದರು.
ಮುಡಾದ ಸಭೆಯಲ್ಲಿ ಏನಾಗುತ್ತದೆ ಎಂದು ಯಾರಿಗೂ ತಿಳಿಯುವುದಿಲ್ಲ. ಯಾವ ಅಜೆಂಡಾವೂ ಇರುವುದಿಲ್ಲ. ಯಾವ ವಿಷಯವನ್ನು ತರುತ್ತಾರೆ, ಯಾವ ವಿಷಯ ಚರ್ಚೆಯಾಗುತ್ತದೆ ಎನ್ನುವುದು ಕೂಡ ತಿಳಿಯುವುದಿಲ್ಲ. ವಿಷಯಗಳು ಹೊರಗೆ ಬರುವುದೇ ಇಲ್ಲ. ಆದರೆ ರೆಕಾರ್ಡ್ ಆಗಿರುತ್ತದೆ. ಇದಕ್ಕ್ಕಾಗಿಯೇ ಕೆಲವು ಎಂಎಲ್‌ಎ, ಎಂಎಲ್‌ಸಿಗಳು ಇದ್ದಾರೆ. ನಾನು ಈಗಿನ ಅವ್ಯವಹಾರ ಕುರಿತು ಮುಡಾ ಆಯುಕ್ತರಿಗೆ ಪತ್ರ ಬರೆದು ಬಹಳ ದಿನವಾಗಿದೆ. ಇಲ್ಲಿವರೆಗೂ ಪ್ರತಿ ಉತ್ತರ ಬಂದಿಲ್ಲ. ಜುಲೈನಲ್ಲಿ ನಡೆಯುವ ಮುಡಾ ಸಭೆಯಲ್ಲಿ ಕೆಲವೊಂದು ವಿಚಾರಗಳನ್ನು ಸೇರ್ಪಡೆಗೊಳಿಸಲು ಟಿಪ್ಪಣಿಯನ್ನು ಕಳುಹಿಸಿದ್ದೇನೆ. ಸಭೆಯಲ್ಲಿ ವಿಷಯವನ್ನು ಪ್ರಸ್ತ್ತಾಪಿಸುತ್ತೇನೆ. ಆದರೆ ನಮ್ಮ ಕೆಲವು ಜನಪ್ರತಿಧಿಗಳಿಗೆ ಮುಡಾ ಬೇಕಾಗಿಲ್ಲ. ಅವರ ಅಭಿವೃದ್ಧಿಯಾದರೇ ಸಾಕು ಎಂದು ಟೀಕಿಸಿದರು.
50:50 ಅನುಪಾತದ ವಿಚಾರ ಸಭೆಯಲ್ಲಿ ಚರ್ಚೆಯಾಗಿತ್ತೇ ವಿನಹ ನಿರ್ಣಯವಾಗಿರಲಿಲ್ಲ. ಆದರೆ ಮುಡಾ ಅಧಿಕಾರಿಗಳು ನಿರ್ಣಯವಾಗಿದೆ ಎಂದು ಹೇಳಿ 40-50 ವರ್ಷದ ಹಿಂದಿನ ಲೇಔಟ್‌ಗಳಿಗೂ ಇದನ್ನು ಅನ್ವಯ ಮಾಡಿ, ಅಂದಿನವರಿಗೆಲ್ಲ ಪರಿಹಾರ ನೀಡಿ, ಒಬ್ಬೊಬ್ಬರಿಗೆ 20-30 ಸೈಟ್‌ಗಳನ್ನು ನೀಡಿದ್ದಾರೆ. ಪ್ರಾಧಿಕಾರವು ಒಳಸಂಚಿನಿಂದ ಯಾರ-ಯಾರ ಆಸ್ತಿಯನ್ನು ಬಳಸಿಕೊಂಡು ಪರಿಹಾರಗಳನ್ನು ಸಂಬಂಧಿಸಿದವರಿಗೆ ತಿಳಿಯದಂತೆ ಹೇಗೆ ತಗೆದುಕೊಂಡಿದ್ದಾರೆ ಎನ್ನುವುದಕ್ಕೆೆ ಸಿದ್ದರಾಮಯ್ಯ ಅವರ ಹೆಂಡತಿ ಪಾರ್ವತಮ್ಮ ಅವರ ಸೋದರ ಸಂಬಂಧಿ ಮಲ್ಲಣ್ಣ ಎಂಬುವವರ ಕೆಸರೆಯ 464ನೇ ಸರ್ವೇ ನಂಬರಿನ 3.16 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಮಲ್ಲಣ್ಣ ಪಾರ್ವತಮ್ಮನವರಿಗೆ ಆ ಜಮೀನನ್ನು ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದರು. ಮುಡಾ ಇವರ ಹೆಸರಿನಲ್ಲೂ ಪರಿಹಾರವನ್ನು ತಗೆದುಕೊಂಡಿದ್ದಾರೆ. ಈ ರೀತಿಯಾಗಿ ಇನ್ನು ಎಷ್ಟು ಅವ್ಯವಹಾರ ಮಾಡಿರಬೇಕು ಎಂದು ಅವರು ಹೇಳಿದರು.
ಮುಡಾ ಅವ್ಯವಹಾರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಕೂಡ ಶಾಮೀಲಾಗಿದ್ದಾರೆ. ಮಂಜೇಗೌಡ ಎಂಎಲ್‌ಸಿ ಅಲ್ಲ. ಅವರೊಬ್ಬ ಮುಡಾ ಅಟೆಂಡರ್. ಯಾವಾಗಲೂ ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ಫೈಲ್‌ಗಳನ್ನು ಹಿಡಿದುಕೊಂಡು ಓಡಾಡುತ್ತಾರೆ. ಮಲಗುವುದು ಅಲ್ಲೆೆ, ಬೆಳಗ್ಗೆೆ ಎದ್ದು ಮುಖ ತೊಳೆಯುವುದು ಅಲ್ಲೆೆ. ನಾಷ್ಟ-ತಿಂಡಿ ಎಲ್ಲ ಅಲ್ಲೇ.ಎಚ್.ವಿಶ್ವನಾಥ್ವಿಧಾನ ಪರಿಷತ್ ಸದಸ್ಯ