ಸಿರಗುಪ್ಪದಲ್ಲಿ ನಡೆದ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಹಾಯಕ ಸರ್ಕಾರಿ ಅಭಿಯೋಜಕಿ ಶಾರದ, ಸಿ.ಡಿ.ಪಿ.ಒ. ಪ್ರದೀಪ್, ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ, ಕಾರ್ಯದರ್ಶಿ ಎಂ.ಶಿವಕುಮಾರ್‌ಸ್ವಾಮಿ, ಉಪಾಧ್ಯಕ್ಷ ಶರೀಫ್‌ಸಾಬ್.ಎಂ, ಪ್ಯಾನಲ್ ವಕೀಲ ಎನ್.ಅಬ್ದುಲ್‌ಸಾಬ್, ಮಲ್ಲಿಗೌಡ, ತಾ.ಪಂ.ವ್ಯವಸ್ಥಾಪಕಿ ಸುಜಾತ, ಕಾರ್ಮಿಕ ನಿರೀಕ್ಷಕ ತಿರುಮಲೇಶ್ ಇದ್ದರು. 
ಜಿಲ್ಲೆ

ದುಷ್ಕೃತ್ಯಗಳ ತಡೆಗೆ ಎಲ್ಲರ ಶ್ರಮ ಅಗತ್ಯ

ಸಿರಗುಪ್ಪ: ದೇಶದಲ್ಲಿ ನಡೆಯುವ ಮಾನವ ಕಳ್ಳ ಸಾಗಾಣಿಕೆಯನ್ನು ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಪಾಲಕರು ಹಾಗೂ ಸಾರ್ವಜನಿಕರ ವಿಶೇಷ ಕಾಳಜಿಯಿಂದ ತಡೆಯಬಹುದಾಗಿದೆ ಎಂದು ಸಿ.ಡಿ.ಪಿ.ಒ.ಪ್ರದೀಪ್ ಹೇಳಿದರು.

ಸಿ.ಡಿ.ಪಿ.ಒ ಕಚೇರಿ ಸಭಾಂಗಣದಲ್ಲಿ ತಾಲೂಕಾಡಳಿತ, ತಾಪಂ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿರುದ್ಯೋಗ, ಆರ್ಥಿಕ ಸಮಸ್ಯೆ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲವರು ಮಕ್ಕಳು, ಮಹಿಳೆಯರು ಎನ್ನದೆ ಅಪಹರಿಸಿ ದೇಶ ವಿದೇಶಗಳಿಗೆ ಸಾಗಾಣಿಕೆ ಮಾಡುತ್ತಿದ್ದಾರೆ. ಇಂತಹ ಕೃತ್ಯಗಳನ್ನು ತಡೆಯಲು ಪ್ರತಿಯೊಬ್ಬರೂ ಶ್ರಮಿಸಬೇಕ ಎಂದರು.

ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ, ಕಾರ್ಯದರ್ಶಿ ಎಂ.ಶಿವಕುಮಾರ್‌ಸ್ವಾಮಿ, ಪ್ಯಾನಲ್ ವಕೀಲ ಎನ್.ಅಬ್ದುಲ್‌ಸಾಬ್, ಸಹಾಯಕ ಸರ್ಕಾರಿ ಅಭಿಯೋಜಕಿ ಶಾರದ, ತಾ.ಪಂ.ವ್ಯವಸ್ಥಾಪಕಿ ಸುಜಾತ, ವಕೀಲರ ಸಂಘದ ಉಪಾಧ್ಯಕ್ಷ ಶರೀಫ್‌ಸಾಬ್.ಎಂ, ಕಾರ್ಮಿಕ ನಿರೀಕ್ಷಕ ತಿರುಮಲೇಶ್, ಪ್ಯಾನಲ್ ವಕೀಲರಾದ ಮಲ್ಲಿಗೌಡ, ವೆಂಕಟೇಶನಾಯ್ಕ ಇದ್ದರು.