ಮಾನ್ವಿ: ಸೇಡಮ್ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸ್ವರ್ಣ ಮಹೋತ್ಸವ ಅಂಗವಾಗಿ ಬೀರನಹಳ್ಳಿಯಲ್ಲಿ ರಾಷ್ಟ್ರ ಮಟ್ಟದ 7ನೇ ಭಾರತೀಯ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ವಿಕಾಸ ಪಥಯಾತ್ರೆಯನ್ನು ವಿವಿಧ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಮಂಗಳವಾರ ಸ್ವಾಗತಿಸಿದವು. ನಂತರ ಶ್ರೀಗಳು ಮಾತನಾಡಿದರು.
‘ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ ನಮ್ಮ ನಡೆ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ದೃಷ್ಟಿ ಬದಲಾದರೆ ಸೃಷ್ಟಿ ಬದಲಾದಿತು ಎಂಬ ಸಂಕಲ್ಪದಿಂದ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಿ.
2025ರ ಜ.29 ರಿಂದ ಫೆ.6ರವರೆಗೆ 9ದಿನಗಳಕಾಲ ಮಾತೆ, ದೇಶ, ಧರ್ಮ, ಸಂಸ್ಕೃತಿ, ಶಿಕ್ಷಣ, ಸೇವೆ, ಸ್ವಯಂ ಉದ್ಯೋಗ, ಯುವಶಕ್ತಿ, ಆಹಾರ-ಆರೋಗ್ಯ, ಪರಿಸರ, ಕೃಷಿ, ಗ್ರಾಮ, ಸ್ವದೇಶಿ ಸ್ವಾಭಿಮಾನ ಇತ್ಯಾದಿ ವಿಷಯಾಧಾರಿತ ಚಿಂತನ ಸಮಾವೇಶಗಳನ್ನು ಅಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ತತ್ವಜ್ಞಾನಿಗಳು, ಮಹಾನೀಯರು, ಸಾಧಕರು ಭಾಗವಹಿಸಲಿದ್ದಾರೆ.
ಕಲ್ಯಾಣ ಕರ್ನಾಟಕ ವಿಕಾಸ ಪಥಯಾತ್ರೆಯನ್ನು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ 48 ತಾಲೂಕುಗಳು ಸೇರಿ ಐದು ಸಾವಿರ ಕಿಮೀ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಮುಖರಾದ ಕೆ.ಇ.ನರಸಿಂಹ, ವಿಜಯಲಕ್ಷ್ಮೀ, ಶಶಿಕಲಾ ಪಾಟೀಲ್, ಎಚ್.ಶಫುದ್ದೀನ್ ಪೋತ್ನಾಳ, ಚಂದ್ರಶೇಖರ ಬಲ್ಲಟಗಿ, ಬಿ.ಮೌಲಪ್ಪ, ಸುಭಾಷ ಪಾಟೀಲ್, ಆನಿಲ್‌ಕುಮಾರ್, ರಾಜು ತಾಳಿಕೋಟೆ, ಮಹಾಂತೇಶ್ ವಲೇಕಾರ್, ಭೀಮರಾಯ ಸೀತಿಮನಿ, ಶಂಕ್ರಪ್ಪ, ನಾಗರಾಜ ಶೆಟ್ಟಿ ಇತರರಿದ್ದರು.