ಹಿಂಡಲಗಾ ಲಕ್ಷ್ಮಿನಗರದಲ್ಲಿ ಹಾಗೂ ಬಡಾಲ ಅಂಕಲಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಯುವ ಮುಖಂಡ ಮೃಣಾಲ ಹೆಬ್ಬಾಳ್ಕರ್ ಮಂಗಳವಾರ ಚಾಲನೆ ನೀಡಿದರು. ಮಿನಾಕ್ಷಿ ಹಿತ್ತಲಮನಿ, ರಾಚಯ್ಯ ಅಜ್ಜನವರು, ಪ್ರವೀಣ ಪಾಟೀಲ, ಗಜಾನಂದ ಬಾಂದೇಕರ ಇತರರಿದ್ದರು. 
ಜಿಲ್ಲೆ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಶಂಕರ ಗೆಜ್ಜಿ

ಬೆಳಗಾವಿ: ಗ್ರಾಮೀಣ ಮತಕ್ಷೇತ್ರದ ಹಿಂಡಲಗಾ ಲಕ್ಷ್ಮೀ ನಗರದಲ್ಲಿ ಹಾಗೂ ಬಡಾಲ ಅಂಕಲಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಯುವ ಮುಖಂಡ ಮೃಣಾಲ ಹೆಬ್ಬಾಳ್ಕರ್ ಮಂಗಳವಾರ ಚಾಲನೆ ನೀಡಿದರು. ಹಿಂಡಲಗಾ ಲಕ್ಷ್ಮಿ ನಗರದ ಡಿಫೆನ್ಸ್ ಕಾಲನಿಯಲ್ಲಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಹಾಗೂ ಬಡಾಲ ಅಂಕಲಗಿ ಗ್ರಾಮದಲ್ಲಿ 35 ಲಕ್ಷ ರೂ.ಗಳ ವೆಚ್ಚದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಹಿತ್ತಲಮನಿ, ವೇದಮೂರ್ತಿ ರಾಚಯ್ಯ ಅಜ್ಜನವರು, ಪ್ರವೀಣ ಪಾಟೀಲ, ಗಜಾನಂದ ಬಾಂದೇಕರ, ಪ್ರೇರಣಾ ಮಿರಜಕರ, ರೇಣುಕಾ ಭಾತ್ಕಂಡೆ, ಅಲ್ಕಾ ಕಿತ್ತೂರ, ಸೀಮಾ ದೇವಕರ, ಎಂ.ವೈ.ತಳವಾರ, ದಿಲೀಪ ರಾಣಿ, ವಿಶ್ವನಾಥ ಪಾಟೀಲ, ವಿಜಯ್ ಪಾಟೀಲ, ಹರಿಶ್ಚಂದ್ರ ಪಾಟೀಲ, ಗಜಾನಂದ ಸುತಾರ ಇತರರಿದ್ದರು.