ಜಿಲ್ಲೆ

ಪ್ರೇಮಿಗಳಲ್ಲಿ ಮನಸ್ತಾಪ: ನೇಣಿಗೆ ಶರಣಾದ ಪ್ರೇಯಸಿ, ಪ್ರಿಯಕರನ ಬಂಧನ...

Webdesk - Ravikanth

ಬೆಂಗಳೂರು: ಪ್ರೇಮಿಗಳಲ್ಲಿ ಮನಸ್ತಾಪ ಮೂಡಿ, ಪ್ರೇಮದಲ್ಲಿ ಬಿರುಕುಂಟಾದ ಪ್ರಕರಣ ಒಬ್ಬರ ಸಾವಿನಲ್ಲಿ ಅಂತ್ಯಗೊಂಡಿದೆ. ಈ ಪ್ರಕರಣದಲ್ಲಿ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಪ್ರಿಯಕರನನ್ನು ಬಂಧಿಸಿದ್ದಾರೆ.

ಚಂದನಾ (23) ಆತ್ಮಹತ್ಯೆ ಮಾಡಿಕೊಂಡ ಯುವತಿ. ನಾಗರಾಜು ಬಂಧಿತ ಆರೋಪಿ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥನಗರದಲ್ಲಿ ಪ್ರಕರಣ ನಡೆದಿದೆ.

ಇವರಿಬ್ಬರು ಬಾಗಲಗುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ವಾನ್ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಇಬ್ಬರೂ 2 ವರ್ಷಗಳಿಂದ ಪ್ರೀತಿಸುತ್ತಿದ್ದು, ಪ್ರೇಮದ ವಿಚಾರವನ್ನು ಚಂದನಾ ತನ್ನ ಮನೆಯವರಿಗೂ ತಿಳಿಸಿದ್ದಳು.

ಆದರೆ ಇದ್ದಕ್ಕಿದ್ದ ಹಾಗೆ ಇಬ್ಬರ ಪ್ರೀತಿಯಲ್ಲಿ ಬಿರುಕು ಮೂಡಿದ್ದು, ಮನಸ್ತಾಪ ಉಂಟಾಗಿತ್ತು. ಇದರಿಂದ ನೊಂದಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಆಕೆಯ ಪಾಲಕರು ನಾಗರಾಜು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಅವರು ಆತನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.