ಜಿಲ್ಲೆ

ಅಪ್ರಾಪ್ತಳ ಮೇಲೆ ಅತ್ಯಾಚಾರ; ಪ್ರಕರಣ ದಾಖಲು

Haveri - Kariyappa Aralikatti

ಹಾವೇರಿ: ಅಪ್ರಾಪ್ತಳನ್ನು ಕರೆದುಕೊಂಡು ಹೋಗಿ ಗುಡಿಸಲಿನಲ್ಲಿ ಅತ್ಯಾಚಾರ ಎಸಗಿದ ಘಟನೆ ಕುರಿತು ಇಲ್ಲಿಯ ಮಹಿಳಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಬಯಿ ನಿವಾಸಿ ಚೌಡಪ್ಪ ರಾಮಣ್ಣ ಕೊರಮ ಅತ್ಯಾಚಾರ ಎಸಗಿದ ಆರೋಪಿ.

ಈತ 14 ವರ್ಷದ ಅಪ್ರಾಪ್ತಳನ್ನು ಕರೆದುಕೊಂಡು ಹೋಗಿ ಗುಡಿಸಲಿನಲ್ಲಿ ಅತ್ಯಾಚಾರ ಎಸಗಿದ್ದಾನೆ. ಈತ ನಿರಂತರ ಅತ್ಯಾಚಾರ ಮಾಡಿದ್ದರಿಂದ ಅಪ್ರಾಪ್ತಳು ಗಭಿರ್ಣಿಯಾಗಿದ್ದಾಳೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.