ಜಿಲ್ಲೆ

ಅಪ್ರಾಪ್ತಳನ್ನು ಪ್ರೀತಿಸಿ ಅತ್ಯಾಚಾರ ಎಸಗಿದ ಆರೋಪಿ

Haveri - Kariyappa Aralikatti

ಹಾವೇರಿ: ಅಪ್ರಾಪ್ತಳನ್ನು ಪ್ರೀತಿಸಿ ಆಕೆ ಮೇಲೆ ಅತ್ಯಾಚಾರ ಎಸಗಿ ಗಭಿರ್ಣಿಯನ್ನಾಗಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನ ವಿರುದ್ಧ ಇಲ್ಲಿಯ ಮಹಿಳಾ ಪೊಲೀಸ್​ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ತಾಲೂಕಿನ ಅಕ್ಕೂರ ಗ್ರಾಮದ ಬಸನಗೌಡ ಈರನಗೌಡ ರಾಮನಗೌಡ್ರ ಅತ್ಯಾಚಾರ ಎಸಗಿದ ಆರೋಪಿ.
ಈತ ಅಪ್ರಾಪ್ತಳನ್ನು ಪ್ರೀತಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಗಭಿರ್ಣಿಯನ್ನಾಗಿ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.