ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾಮಗಾರಿ ಮಾಡಿದ ಗುತ್ತಿಗೆದಾರರೊಬ್ಬರ ಹಣ ಪಾವತಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಸಿವಿಲ್ ಬಂಧನಕ್ಕೊಳಗಾಗಿದ್ದ ಸಣ್ಣ ನೀರಾವರಿ ಇಲಾಖೆಯ ಧಾರವಾಡ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ದೇವರಾಜ ಶಿಗ್ಗಾಂವಿ ಬುಧವಾರ ಸಂಜೆ ಬಿಡುಗಡೆಯಾಗಿದ್ದಾರೆ.
ಹುಬ್ಬಳ್ಳಿಯ ಗುತ್ತಿಗೆದಾರ ಆರ್.ಎನ್. ನಾಯಕ ಎಂಬುವರು ಸಣ್ಣ ನೀರಾವರಿ ಇಲಾಖೆಯ ಕಾಮಗಾರಿ ಮಾಡಿದ್ದರು. 30 ವರ್ಷಗಳಿಂದ ಇಲಾಖೆಯ ಅಽಕಾರಿಗಳು ಕಾಮಗಾರಿಯ 18 ಲಕ್ಷ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಅದರ ಬಡ್ಡಿ ಬೆಳೆದು 3 ಕೋಟಿ 34 ಲಕ್ಷ ರೂಪಾಯಿ ಆಗಿತ್ತು. ಈ ಸಂಬAಧ ನಾಯಕ ಅವರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮಂಗಳವಾರ ಪ್ರಕರಣದ ವಿಚಾರಣೆ ನಡೆದಿತ್ತು. ಇಂಜಿನಿಯರ್ ಪರ ವಕೀಲರು ಬಾಕಿ ಹಣ ಪಾವತಿಗೆ 15 ದಿನಗಳ ಕಾಲಾವಕಾಶ ಕೋರಿದ್ದರು. ಇದಕ್ಕೆ ಒಪ್ಪದ ನ್ಯಾಯಾಽÃಶರು, ಇಂಜಿನಿಯರ್‌ಗೆ ಬಾಡಿ ವಾರಂಟ್ ಜಾರಿ ಮಾಡಿ ಸಿವಿಲ್ ಬಂಧನಕ್ಕೆ ಒಪ್ಪಿಸಿದ್ದರು.
ಜಿಲ್ಲಾ ಸರ್ಕಾರಿ ವಕೀಲ ಜಿ.ಜಿ. ಅಮೋಘಿಮಠ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ಎಸ್.ಎನ್. ಚಿಕ್ಕಣ್ಣನವರ ಅವರು ಬುಧವಾರ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಸಿವಿಲ್ ಬಂಧನದ ಬಿಡುಗಡೆಯ ಅರ್ಜಿ ಸಲ್ಲಿಸಿದರು. ಬಾಕಿ ಹಣ ಪಾವತಿಗೆ 15 ದಿನಗಳ ಕಾಲಾವಕಾಶ ಕೋರಿದರು. ಜ. 17ರೊಳಗೆ 1 ಕೋಟಿ ರೂಪಾಯಿ ಬಾಕಿ ಪಾವತಿಸಬೇಕು. 3 ತಿಂಗಳೊಳಗೆ ಉಳಿದ ಹಣವನ್ನು ಪಾವತಿಸಬೇಕು. ಮುಂದಿನ ವಿಚಾರಣೆಗಳಿಗೆ ಹಾಜರಾಗಬೇಕು ಎಂಬ ಷರತ್ತು ವಿಽಸಿದ ನ್ಯಾಯಾಲಯ, ಇಂಜಿನಿಯರ್ ದೇವರಾಜ ಶಿಗ್ಗಾಂವಿ ಬಿಡುಗಡೆಗೆ ಆದೇಶಿಸಿತು.
ಸರ್ಕಾರದ ಪರ ಜಿಲ್ಲಾ ಸರ್ಕಾರಿ ವಕೀಲರು ಜಿ.ಜಿ. ಅಮೋಘಿಮಠ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ಎಸ್.ಎನ್. ಚಿಕ್ಕಣ್ಣನವರ ವಾದ ಮಂಡಿಸಿದರು. ಗುತ್ತಿಗೆದಾರರ ಪರ ಮುತ್ತು ಸೋಮಣ್ಣವರ ವಾದ ಮಂಡಿಸಿದರು.