ಜಿಲ್ಲೆ

ಅಪ್ರಾಪ್ತ ಬಾಲಕನಿಂದ ಕಾರು ಚಾಲನೆ ಡಿಕ್ಕಿ ಹೊಡೆದು ಮಹಿಳೆ ಗಂಭೀರ


ಮಂಗಳೂರು: ನಗರದ ಹೊರವಲಯದ ಮೂಡುಶೆಡ್ಡೆಯಲ್ಲಿ ಅಪ್ರಾಪ್ತ ಬಾಲಕ ಕಾರು ಚಲಾಯಿಸಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಗೆ ಢಿಕ್ಕಿ ಹೊಡೆದಿದ್ದು, ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.


ಮೂಡುಶೆಡ್ಡೆ ನಿವಾಸಿ ಮಮತಾ ಅವರು ಗಾಯಗೊಂಡವರು. ಪ್ರತಿನಿತ್ಯದಂತೆ ಬೆಳಗ್ಗೆ ಕೆಲಸಕ್ಕೆ ತೆರಳಲೆಂದು ಬಸ್‌ಗಾಗಿ ಕಾಯುತ್ತಿದ್ದರು. ಒಳರಸ್ತೆಯಿಂದ ಬಂದ ಕಾರು ಅವರಿಗೆ ಢಿಕ್ಕಿ ಹೊಡೆದಿದೆ. ಮಹಿಳೆಗೆ ಢಿಕ್ಕಿಯಾದ ಕಾರು ಸ್ವಲ್ಪ ದೂರ ಮಹಿಳೆಯನ್ನು ಎಳೆದುಕೊಂಡು ಹೋಗಿದ್ದು, ಇದರಿಂದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರನ್ನು 9ನೇ ತರಗತಿಯ ಬಾಲಕನೊಬ್ಬ ಚಾಲನೆ ಮಾಡುತಿದ್ದ, ಕಾರಿನಲ್ಲಿ ಆತ ಒಬ್ಬನೇ ಇದ್ದ ಎಂದು ತಿಳಿದು ಬಂದಿದೆ. ಪಣಂಬೂರು ಸಂಚಾರ ಠಾಣೆಯುಲ್ಲಿ ಪ್ರಕರಣ ದಾಖಲಾಗಿದೆ.