ಮಡಿಕೇರಿ: ಕೊಡಗು ಹೆಗ್ಗಡೆ ಸಮಾಜದ ನಿಯೋಗವು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕ ಪೊನ್ನಣ್ಣ ಅವರ ನೇತೃತ್ವದಲ್ಲಿ ವಿಕಾಸಸೌಧ ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರನ್ನು ಭೇಟಿ ಮಾಡಿ ಬಿಟ್ಟಂಗಾಲದಲ್ಲಿರುವ ಸಮಾಜದ ಕಟ್ಟಡದ ಅಭಿವೃದ್ಧಿಯ ಮುಂದುವರೆದ ಕಾಮಗಾರಿಗೆ ಅನುದಾನ ಕೋರಿ ಮನವಿ ಪತ್ರ ಸಲ್ಲಿಸಲಾಯಿತು.
ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ, ಉಪಾಧ್ಯಕ್ಷ ಕೊರಕುಟ್ಟಿರ ಸರಚಂಗಪ್ಪ, ನಿರ್ದೇಶಕರಾದ ಕೊರಂಡ ಪ್ರಕಾಶ್ ನಾಣಯ್ಯ, ಪ್ರಮುಖರಾದ ಪಡಿಞರಂಡ ಗಿರೀಶ್, ಕಾಕೇರ ರವಿ, ಮುಂತಾದವರು ಹಾಜರಿದ್ದರು.