ಜಿಲ್ಲೆ

ಹೀನ ಸಂಸ್ಕೃತಿಯನ್ನು ಪ್ರದರ್ಶಿಸಿದ ಸಿ.ಟಿ.ರವಿ, ಸದನಗಳ ವಿದ್ಯಮಾನದ ಬಗ್ಗೆ ಸಚಿವರ ಅಸಮಾಧಾನ

ಚಿಕ್ಕಬಳ್ಳಾಪುರ: ಮಹಿಳಾ ಸಚಿವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೀನ ಸಂಸತಿಯನ್ನು ಪ್ರದರ್ಶಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಟೀಕಿಸಿದರು.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸದನದ ಅಧಿವೇಶನದಲ್ಲಿ ಜನಪ್ರತಿನಿಧಿಗಳ ನಡೆಯು ಮಾದರಿಯಾಗಿರಬೇಕು. ಆದರೆ, ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂವಿಧಾನ ಶಿಲ್ಪಿಯ ಬಗ್ಗೆ ಅನಪೇತ ಹೇಳಿಕೆಯನ್ನು ನೀಡಿದ್ದಾರೆ. ಇಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಚಿವರನ್ನು ನಿಂದಿಸಿದ್ದಾರೆ. ಸದನಗಳಲ್ಲಿ ಅಧಿವೇಶನಗಳು ನಿಯಮಾನುಸಾರ ನಡೆಯಬೇಕು. ಜನಪ್ರತಿನಿಧಿಗಳು ಜವಾಬ್ದಾರಿಯನ್ನು ಪ್ರದರ್ಶಿಸಬೇಕು. ಇದನ್ನು ಬಿಟ್ಟು ದಿಕ್ಕು ತಪ್ಪಿಸುವಂತಹ ಕೆಲಸಗಳಾಗುತ್ತಿವೆ ಎಂದು ಬೇಸರಿಸಿದರು.


*ಶತಮಾನೋತ್ಸವ ಪೂರ್ವಭಾ ಸಭೆ*
ಖಾಸಗಿ ಹೋಟೆಲ್‌ ನಲ್ಲಿ ಸಚಿವರ ನೇತೃತ್ವದಲ್ಲಿ 1924 ಬೆಳಗಾವಿ ಎಐಸಿಸಿ ಅಧಿವೇಶನದ ಶತಮಾನೋತ್ಸವ ಆಚರಣೆಯ ಪೂರ್ವಭಾವಿ ಸಭೆಯನ್ನು ಕೈಗೊಂಡು, ಕಾರ್ಯಕ್ರಮ ಯಶಸ್ವಿ ಬಗ್ಗೆ ಚರ್ಚಿಸಲಾಯಿತು.  
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಅನಸೂಯಮ್ಮ ನಟರಾಜನ್, ಜಿ.ಪಂ.ಮಾಜಿ ಅಧ್ಯಕ್ಷ ಗಂಗರೆಕಾಲುವೆ ನಾರಾಯಣಸ್ವಾಮಿ, ಮಾಜಿ ಸದಸ್ಯ ಕೆ.ಎಂ.ಮುನೇಗೌಡ, ಮುಖಂಡರಾದ ಅಡ್ಡಗಲ್ ಶ್ರೀಧರ್, ಮಮತ ಮೂರ್ತಿ ಮತ್ತಿತರರು ಇದ್ದರು.


*ರಂಗಮಂದಿರ ಕಾಮಗಾರಿ ವೀಕ್ಷಣೆ
ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸುತ್ತಿರುವ ರಂಗಮಂದಿರದ ಕಾಮಗಾರಿಯನ್ನು ಸಚಿವರು ವೀಕ್ಷಿಸಿ, ತ್ವರಿತವಾಗಿ ಉದ್ಘಾಟನೆಗೆ ಕ್ರಮ ಕೈಗೊಳ್ಳಲು ಸೂಚಿಸಿದರು.