ಔರಾದ್: ಶಾಲೆ ಆರಂಭದ ಮೊದಲ ದಿನ ಹೊಕ್ರಾಣಾ ಸರ್ಕಾರಿ ಪ್ರೌಢ ಶಾಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಭೇಟಿ ನೀಡಿದರು. ಮೊದಲ ದಿನ ಶಾಲೆಯತ್ತೆ ಹೆಜ್ಜೆ ಹಾಕಿದ ಮಕ್ಕಳಿಗೆ ಹೂವು ಕೊಟ್ಟು, ಸಿಹಿ ತಿನ್ನಿಸುವ ಮೂಲಕ ಸ್ವಾಗತಿಸಿಕೊಂಡರು. ಮುಖ್ಯ ದ್ವಾರದಲ್ಲಿ ನಿಂತ ಸಚಿವರು, ಮಕ್ಕಳ ಕೈಗೆ ಹೂವು ಕೊಟ್ಟು ಸಿಹಿ ನೀಡಿದರು. ಕರೊನಾ ಬಗ್ಗೆ ಭಯಪಡುವುದು ಬೇಡ. ಆದರೆ ಕಡ್ಡಾಯವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕಾಂತ ಹಣಮಶೆಟ್ಟಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸಂಜುಕುಮಾರ ಜುಮ್ಮಾ, ಪ್ರೌಢ ಶಾಲೆ ಮುಖ್ಯಗುರು ರಾಜೇಂದ್ರ ಬೋರಾಳೆ, ಶಿಕ್ಷಕರಾದ ಧನರಾಜ, ಈಶ್ವರಪ್ಪ, ಸಂತೋಷ, ಅಂಕುಶ, ಅನೀಲಕುಮಾರ ಕಟ್ಟೆ, ಪ್ರಾಥಮಿಕ ಶಾಲೆ ಮುಖ್ಯಗುರು ಮನೋಹರ, ಗ್ರಾಪಂ ಸದಸ್ಯರಾದ ಮಹಾದೇವ ಅಚಗಾವೆ, ರಿಜವಾನ್ ಬೇಗಂ, ಅಮ್ಜದ್ ಪಠಾಣ್, ಪಂಢರಿ ಮಾಧವ, ಸೀಮಾ ಜ್ಞಾನೋಬಾ, ವಿಮಲಬಾಯಿ, ಪಂಚಶೀಲ ರಮೇಶ, ಗಿರೀಶಾ ಸುನೀಲ, ಗೋಕುಲ ಮಾಧವ, ಭಗವಾನ ಪಾಟೀಲ್, ರಾಜಾಭಾವು ಪಾಟೀಲ್, ಪಾಶಾಸಾಬ್ ಉದಗೀರೆ ಇದ್ದರು.
ಕರೊನಾ ಬಗ್ಗೆ ಯಾರಲ್ಲೂ ಅನಗತ್ಯ ಭಯ ಬೇಡ. ಮುಂಜಾಗ್ರತಾ ಕ್ರಮ ಪಾಲಿಸಿದರೆ ಸೋಂಕಿನಿಂದ ದೂರವಿರಲು ಸಾಧ್ಯ. ಎಲ್ಲ ಸಾಧಕ-ಬಾಧಕ ಪರಿಶೀಲನೆ ನಂತರವೇ ಸರ್ಕಾರ ಮತ್ತೆ ಶಾಲೆ, ಕಾಲೇಜು ಆರಂಭಿಸಿದೆ. ಶಿಕ್ಷಣ ಸಚಿವ ಸುರೇಶಕುಮಾರ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಶಾಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರು ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಪಾಲಕರು ಮಕ್ಕಳ ಬಗ್ಗೆ ವಿಶೇಷ ನಿಗಾ ವಹಿಸಬೇಕು. | ಪ್ರಭು ಚವ್ಹಾಣ್ಜಿಲ್ಲಾ ಉಸ್ತುವಾರಿ ಸಚಿವ