ಜಿಲ್ಲೆ

ಅಶೋಕಪುರಂನಿಂದ ರೈಲು ಸೇವೆ ವಿಸ್ತರಣೆಗೆ ಸಚಿವ ವಿ.ಸೋಮಣ್ಣ ಚಾಲನೆ

ಮೈಸೂರು: ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ಎರಡನೇ ಪ್ರವೇಶ ದ್ವಾರದ ಹೊಸ ಟಿಕೆಟ್ ಬುಕ್ಕಿಂಗ್ ಕಚೇರಿ ಉದ್ಘಾಟನೆ ಹಾಗೂ ಮೆಮು ಸೇರಿದಂತೆ 8 ಹೆಚ್ಚುವರಿ ರೈಲುಗಳ ಸೇವೆ ವಿಸ್ತರಣೆಗೆ ಶನಿವಾರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಶನಿವಾರ ಹಸಿರು ನಿಶಾನೆ ತೋರಿದರು.

ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವಿ.ಸೋಮಣ್ಣ, ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ ಈಡೇರಿದೆ. ಭಾನುವಾರದಿಂದಲೇ ಅಶೋಕಪುರಂ ರೈಲ್ವೆ ನಿಲ್ದಾಣದಿಂದ ರೈಲುಗಳ ಸೇವೆ ವಿಸ್ತರಣೆಯಾಗಿ ಪ್ರಯಾಣಿಕರು ಸಂಚರಿಸಬಹುದು. ನಗರದ ಕೇಂದ್ರೀಯ ರೈಲ್ವೆ ನಿಲ್ದಾಣ, ಚಾಮರಾಜಪುರಂ ರೈಲು ನಿಲ್ದಾಣದಂತೆ ಇಲ್ಲಿಯೂ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಗೆ ಬೇಕಾದ ಸೌಲಭ್ಯ ನೀಡಲಾಗಿದೆ ಎಂದರು.

ಅಶೋಕಪುರಂ ರೈಲು ನಿಲ್ದಾಣದಲ್ಲಿ ಆರು ಫ್ಲಾಟ್ ಫಾರಂ, ಬುಕ್ಕಿಂಗ್ ಕಚೇರಿಯೊಂದಿಗೆ ಹೊಸ ನಿಲ್ದಾಣದ ಕಟ್ಟಡ, ಪ್ರವೇಶ 1, ಪ್ರವೇಶ 2ರ ಫ್ಲಾಟ್ ಫಾರಂಗಳಿಗೆ ಪಾದಚಾರಿ ಮೇಲ್ಸುತುವೆ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ರೈಲು ಕಾರ್ಯಾಚರಣೆಗಳನ್ನು ಬೆಂಬಲಿಸಲು ರೈಲು ಹಳಿ 4,5,6 ಮತ್ತು 7ರಲ್ಲಿ ಕೋಚ್ ನೀರಿನ ಸೌಲಭ್ಯ ನೀಡಲಾಗಿದೆ ಎಂದು ಹೇಳಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ದೇಶದ ವಿಕಸಿತ ಭಾರತಕ್ಕೆ ಪೂರಕವಾಗುವ ರೀತಿಯಲ್ಲಿ ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದೆ. 2025-26ನೇ ಸಾಲಿನ ಕೇಂದ್ರ ಆಯವ್ಯಯವೂ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಜನರಿಗೆ ಅನುಕೂಲ ಕಲ್ಪಿಸಿದೆ ಎಂದರು.

ರೈಲ್ವೆ ಸೇವೆ ವಿಸ್ತರಣೆ, ಪ್ರಾಚೀನ ಗ್ರಂಥಗಳ ಡಿಜಿಟಲೀಕರಣ, ಮೈಸೂರು-ಕುಶಾಲನಗರ ಚತುಷ್ಪಥ ಕಾಮಗಾರಿ, ಕೊಡಗಿನ ಕುಶಾಲನಗರದಲ್ಲಿ ಉಡಾನ್ ಯೋಜನೆಯಡಿ ಏರ್‌ಸ್ಟ್ರಿಪ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಮುದ್ರ ಯೋಜನೆಯಡಿ ಹೋಂ ಸ್ಟೇಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. 50 ಪ್ರವಾಸೋದ್ಯಮ ಸ್ಥಳಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.

ಶಾಸಕ ಟಿ.ಎಸ್.ಶ್ರೀವತ್ಸ ವಾತನಾಡಿ, ಸಚಿವ ವಿ.ಸೋಮಣ್ಣ ಅಂದರೆ ಒಂದು ಶಕ್ತಿ. ಂಾವುದೇ ಇಲಾಖೆಂು ಜವಾಬ್ದಾರಿ ಕೊಟ್ಟರೂ ಸಮರ್ಥವಾಗಿ ನಿರ್ವಹಿಸುವ ಶಕ್ತಿ ಹೊಂದಿದ್ದಾರೆ. ರಾಜ್ಯದಲ್ಲಿ ದೊಡ್ಡ ನಾಂುಕರಾಗುವ ಜತೆಗೆ ಪ್ರಭಾವ ಮತ್ತು ಶಕ್ತಿ ಪಡೆದುಕೊಂಡಿದ್ದಾರೆ. ವಿಶೇಷವಾಗಿ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಸಹಾಂು ವಾಡಿದ್ದಾರೆ. ಪ್ರತಿನಿತ್ಯ ತಮ್ಮವರಿಗೆ ಹೇಳಿ ಕೆಲಸ ಮಾಡುವಂತೆ ಪ್ರೇರೇಪಿಸಿದನ್ನು ಹೇಳಲಾಗದು ಎಂದು ಹೇಳಿದರು.

ಬಹುದಿನಗಳ ಬೇಡಿಕೆಂುಂತೆ ಅಶೋಕಪುರಂ ರೈಲ್ವೆ ನಿಲ್ದಾಣದಿಂದ ರೈಲುಗಳು ಹೊರಡಿಸಲಾಗುತ್ತಿದೆ. ಒತ್ತಡ ಕಡಿಮೆಂಾಗುವ ಜೊತೆಗೆ ಹಲವಾರು ಅನುಕೂಲ ಆಗಲಿದೆ. ವಿವಿಧ ಬಡಾವಣೆಗಳಿಂದ ರೈಲು ಹೊರಡುವ ಮತ್ತು ಬರುವಾಗ ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ವಾತನಾಡಿ ವಾರ್ಗಗಳನ್ನು ಪರಿಷ್ಕರಿಸಲಾಗುತ್ತದೆ ಎಂದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಕೆ.ವಿವೇಕಾನಂದ, ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಇದ್ದರು.

ಮೈಸೂರಿನ ಅಶೋಕಪುರಂ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ಎರಡನೇ ಪ್ರವೇಶ ದ್ವಾರದ ಹೊಸ ಟಿಕೆಟ್ ಬುಕ್ಕಿಂಗ್ ಕಚೇರಿ ಹಾಗೂ ಮೆಮು ಸೇರಿ ಎಂಟು ಹೆಚ್ಚುವರಿ ರೈಲುಗಳ ಸೇವೆ ವಿಸ್ತರಣೆಗೆ ಹಸಿರು ನಿಶಾನೆ ಸಮಾರಂಭವನ್ನು ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್,ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಕೆ.ವಿವೇಕಾನಂದ, ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಶಿಲ್ಪಿ ಅಗರ್‌ವಾಲ್ ಹಾಜರಿದ್ದರು.

ಮಹಿಳೆ ಸಮಸ್ಯೆ ಆಲಿಸಿದ ಸಚಿವ

ಕಾರ್ಯಕ್ರಮದ ವೇಳೆ ಮಹಿಳೆಯೋಬ್ಬರು ವೇದಿಕೆಯತ್ತ ಬಂದು ಸಚಿವ ಸೋಮಣ್ಣ ಅವರನ್ನು ಭೇಟಿಯಾಗಲು ಯತ್ನಿಸಿದರು. ಅದಕ್ಕೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಅವಕಾಶ ಕೊಡಲಿಲ್ಲ. ಇದರಿಂದ ಕೋಪಗೊಂಡ ಮಹಿಳೆಯು ಪೊಲೀಸರ ವಿರುದ್ಧ ಗಲಾಟೆ ಮಾಡಿ ವೇದಿಕೆಯಲ್ಲಿದ್ದ ಸಚಿವರ ಗಮನ ಸೆಳೆದರು. ತಕ್ಷಣ ಆಕೆಯ ಮನವಿ ಆಲಿಸಿದ ಸಚಿವರು, ವೇದಿಕೆಯಲ್ಲಿಯೇ ರೈಲ್ವೆ ಇಲಾಖೆಯಿಂದ ಆಕೆಗೆ ಏನಾದರೂ ತೊಂದರೆ ಯಾಗಿದ್ದಾರೆ. ಆಕೆಯನ್ನು ಕರೆಯಿಸಿ ಮಾಹಿತಿ ಪಡೆದು ನ್ಯಾಯ ಒದಗಿಸಿ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಸ್ತರಣೆಯಾದ ರೈಲುಗಳು

16021/16022 ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಕಾವೇರಿ ಎಕ್ಸ್‌ಪ್ರೆಸ್

20623/20624 ಮೈಸೂರು-ಕೆಎಸ್‌ಆರ್ ಬೆಂಗಳೂರು ಸಿಟಿ ಮಾಲ್ಗುಡಿ ಎಕ್ಸ್‌ಪ್ರೆಸ್

12785/12786 ಕಾಚಿಗುಡಾ-ಮೈಸೂರು ಎಕ್ಸ್‌ಪ್ರೆಸ್

12609/12610 ಚೆನ್ನೈ ಸೆಂಟ್ರಲ್-ಮೈಸೂರು ಎಕ್ಸ್‌ಪ್ರೆಸ್

06525/06526 ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು

06559/06560 ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು

06255/06256 ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು

06257/06258 ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು

------------------------