ಜಿಲ್ಲೆ

ಇಂದು ಸಚಿವ ವಿ.ಸೋಮಣ್ಣ ದಕ್ಷಿಣ ಕನ್ನಡ ಜಿಲ್ಲೆಗೆ

reportermng

ಮಂಗಳೂರು: ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಆ.27ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದು, ಬೆಳಗ್ಗೆ 10 ಗಂಟೆಗೆ ಧರ್ಮಸ್ಥಳದಿಂದ ರಸ್ತೆ ಮೂಲಕ ಬೆಳ್ತಂಗಡಿ ತಾಲೂಕಿಗೆ ತೆರಳಲಿದ್ದಾರೆ. 10.30ಕ್ಕೆ ವಸತಿ ಇಲಾಖೆಯ ರಾಜೀವಗಾಂಧಿ ವಸತಿ ನಿಗಮದಿಂದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳ ಮನೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.


11.30ಕ್ಕೆ ಬೆಳ್ತಂಗಡಿಯಿಂದ ರಸ್ತೆ ಮೂಲಕ ಉಜಿರೆ, ಧರ್ಮಸ್ಥಳ ಹಾಗೂ ನೆಟ್ಟಣ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯ ತಲುಪಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ನಂತರ ಅಲ್ಲಿಂದ ಮಧ್ಯಾಹ್ನ 1.30 ಗಂಟೆಗೆ ನೆಟ್ಟಣ, ಉಪ್ಪಿನಂಗಡಿ ಬಂಟ್ವಾಳದ ಮೂಲಕ ಮಂಗಳೂರು ಮಾರ್ಗವಾಗಿ ಮಧ್ಯಾಹ್ನ 3.30ಕ್ಕೆ ಮೂಡುಬಿದಿರೆ ತಾಲೂಕಿನ ಮೂಲ್ಕಿಯಲ್ಲಿ ಆಡಳಿತ ಸೌಧದ ನೂತನ ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಗೆ ಮೂಡುಬಿದಿರೆಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ 6.50ಕ್ಕೆ ಮಂಗಳೂರಿನಿಂದ ಇಂಡಿಗೋ ವಿಮಾನದ ಮೂಲಕ ಹೊರಟು 7.40ಕ್ಕೆ ಬೆಂಗಳೂರು ಕೇಂದ್ರ ಸ್ಥಾನ ತಲುಪಲಿದ್ದಾರೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.