ಕಲಾದಗಿ ಸಮೀಪದ ತುಳಸಿಗೇರಿಯಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಮಲ್ಲಕಂಬ ಪಂದ್ಯಾವಳಿಯಲ್ಲಿ ಮಕ್ಕಳ ಕಸರತ್ತುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ವೀಕ್ಷಿಸಿದರು. ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಗ್ರಾಮದ ಪ್ರಮುಖರು ಇದ್ದರು. 
ಜಿಲ್ಲೆ

ಮಲ್ಲಕಂಬ ಪಂದ್ಯಾವಳಿ ವೀಕ್ಷಿಸಿದ ಸಚಿವ ತಿಮ್ಮಾಪೂರ

ಕಲಾದಗಿ: ಸಮೀಪದ ತುಳಸಿಗೇರಿಯಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ಮಲ್ಲಕಂಬ ಅಂತಿಮ ಪಂದ್ಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಕುತೂಹಲದಿಂದ ವೀಕ್ಷಿಸಿದರು.

ಇಲ್ಲಿನ ಕ್ರೀಡಾಸಾಧಕರು ರಾಷ್ಟ್ರ- ಅಂತಾರಾಷ್ಟ್ರಮಟ್ಟದಲ್ಲಿ ಮಲ್ಲಕಂಬ, ಸೈಕ್ಲಿಂಗ್‌ನಂತಹ ಕ್ರೀಡೆಗಳಲ್ಲಿ ಸಾಧನೆ ಮಾಡಿರುವುದು ಸಂತಸ ತಂದಿದೆ. ಅತ್ಯುತ್ತಮ ಕ್ರೀಡಾಪಟುಗಳನ್ನು ತಯಾರು ಮಾಡಿರುವ ತುಳಸಿಗೇರಿ ಗ್ರಾಮ ನಮ್ಮ ಬಾಗಲಕೋಟೆ ಜಿಲ್ಲೆಯಲ್ಲಿದೆ ಎಂಬುದೇ ಹೆಮ್ಮೆ ವಿಷಯ ಎಂದು ಸಚಿವರು ಹೇಳಿದರು.

ಮಲ್ಲಕಂಬದ ವಿವಿಧ ಭಂಗಿಗಳನ್ನು ನೋಡಿ ಆಶ್ಚರ್ಯಚಕಿತರಾದ ಸಚಿವರು, ತುಳಸಿಗೇರಿಯ ಹಿರಿಯ ಕ್ರೀಡಾಪಟುಗಳ ಸಾಧನೆಯನ್ನೂ ನೆನಪಿಸಿಕೊಂಡರಲ್ಲದೆ, ತಾವೂ ಉತ್ತಮ ಕಬಡ್ಡಿ ಆಟಗಾರನಾಗಿದ್ದೆ ಎಂದು ಯೌವನಾವಸ್ಥೆಯಲ್ಲಿನ ಕ್ರೀಡಾ ನೆನಪು ಮೆಲುಕು ಹಾಕಿದರು. ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಪ್ರಮುಖರು ಇದ್ದರು.