SHIVARAJA TANGADAGI 
ಜಿಲ್ಲೆ

ಸರ್ಕಾರದ ದುಡ್ಡಲ್ಲಿ ಶಾಸಕರ ಪ್ರವಾಸವಿಲ್ಲ:ತಂಗಡಗಿ

ಕೊಪ್ಪಳ:ದುಬೈ ಪ್ರವಾಸ ಮಾಡುವ ಶಾಸಕರು ಸರ್ಕಾರದ ದುಡ್ಡಲ್ಲಿ ಹೋಗುತ್ತಿಲ್ಲ. ವೈಯಕ್ತಿಕ ಪ್ರವಾಸ ಹಮ್ಮಿಕೊಂಡಿರಬಹುದು ಎಂದು ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸಮರ್ಥಿಸಿಕೊಂಡರು.

ಸಿಎಂ ಸಿದ್ದರಾಮಯ್ಯ ಯಾವ ಸಚಿವ, ಶಾಸಕರಿಗೆ ವಿದೇಶಿ ಪ್ರವಾಸಕ್ಕೆ ಅವಕಾಶ ನೀಡಿಲ್ಲ. ವೈಯಕ್ತಿಕ ಪ್ರವಾಸ ಮಾಡುತ್ತಿರಬಹುದು. ನಾನು ಸರ್ಕಾರಿ ಕಾರ್ಯಕ್ರಮಗಳಿಗಾಗಿ ಲಂಡನ್, ಅಮೆರಿಕಾ, ಇತರ ದೇಶಗಳಿಗೆ ತೆರಳಬೇಕಿತ್ತು.

ಆದರೆ, ಸಿಎಂ ಅನುಮತಿ ನೀಡಲಿಲ್ಲ. ಹೀಗಾಗಿ ನಾನು ಪ್ರವಾಸ ಮೊಟಕುಗೊಳಿಸಿದೆ. ವೈಯಕ್ತಿಕ ಪ್ರವಾಸಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ. ಸದ್ಯ ಸಿಎಂ ಸ್ಥಾನ ಖಾಲಿ ಇಲ್ಲ. ದಲಿತ ಸಿಎಂ ಸೇರಿ ಯಾವುದೇ ಚರ್ಚೆಗಳು ನಡೆದಿಲ್ಲ.

ಐದು ವರ್ಷ ಸಿಎಂ ಬದಲಾವಣೆ ಆಗಲ್ಲ. ನಮ್ಮ ಬಳಿ ಬಂಡೆ ಇದೆ. ರಮೇಶ ಜಾರಕಿಹೊಳಿ ಮಾತು ಲೆಕ್ಕಕ್ಕಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ವರ್ಷವಿಡಿ ಕಾರ್ಯಕ್ರಮ ಆಯೋಜಿಸಲಾಗುವುದು. ಇಂದು (ನ.2) ಹಂಪಿಯಲ್ಲಿ ರಥ ಯಾತ್ರೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಬಳಿಕ ಕೊಪ್ಪಳ, ಗದಗ ಮಾರ್ಗವಾಗಿ ಯಾತ್ರೆ ಸಾಗಲಿದೆ.

ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಅಂದು ಹಿಂದುಳಿದ ವರ್ಗಗಳ ನಾಯಕ ದೇವರಾಜ ಅರಸು ಅವರಿಗೆ ಸನ್ಮಾನ ಮಾಡಲಾಗಿತ್ತು. ನ.3ರಂದು ನಮ್ಮ ಹಿಂದುಳಿದ ನಾಯಕ, ಸಿಎಂ ಸಿದ್ದರಾಮಯ್ಯ ಅವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.

ಕೇಂದ್ರ ಅಧಿಕಾರಿಗಳು ಬಂದು ಬರ ಅಧ್ಯಯ ನಡೆಸಿದ್ದಾರೆ. ನಮ್ಮ ಸಿಎಂ ಹಾಗೂ ಸಚಿವರು ಹೋದರು ಕೇಂದ್ರ ಮಂತ್ರಿಗಳು, ಪಿಎಂ ಸಿಗುತ್ತಿಲ್ಲ. ಕರ್ನಾಟಕವೂ ಭಾರತದಲ್ಲಿದೆ. ತೆರಿಗೆ ಕಟ್ಟುತ್ತೇವೆ. ಎನ್‌ಡಿಆರ್‌ಎಫ್ ನಿಯಮಗಳನ್ನು ಕೇಂದ್ರ ಮಾಡುತ್ತದೆ. ಬರ ಪರಿಹಾರಕ್ಕೆ ಹಣ ನಿಡುತ್ತಿಲ್ಲ. ಬಿಜೆಪಿವರು ನಾಟಕ ಕಂಪನಿಯವರಂತೆ ನಾಟಕ ಮಾಡುತ್ತಾರೆ. ಶಿವರಾಜ ತಂಗಡಗಿ. ಸಚಿವ.
ಶಿವರಾಜ ತಂಗಡಗಿ. ಸಚಿವ.