ಜಿಲ್ಲೆ

ಸಚಿವ ಸತೀಶ ಜಾರಕಿಹೊಳಿ ಸೇರಿ ಮೂವರು ಮುಕ್ತ ವಿವಿಯ ಗೌರವ ಡಾಕ್ಟರೇಟ್‌ಗೆ ಅಯ್ಕೆ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 20ನೇ ವಾರ್ಷಿಕ ಘಟಿಕೋತ್ಸವವನ್ನು ಮಾ.27 ರಂದು ಬೆಳಗ್ಗೆ 11ಕ್ಕೆ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದು, ಸಚಿವ ಸತೀಶ ಎಲ್. ಜಾರಕಿಹೊಳಿ ಸೇರಿದಂತೆ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಹೇಳಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೂವರಿಗೆ ‘ಗೌಡ’: ಲೋಕೋಪಯೋಗಿ ಸಚಿವ ಸತೀಶ ಎಲ್. ಜಾರಕಿಹೊಳಿ, ಚಿತ್ರದುರ್ಗದ ಐಡಿಯಲ್ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಸಿ.ಎಂ. ಇರ್ಫಾನುಲ್ಲಾ ಷರೀಫ್ ಮತ್ತು ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಡಾ. ದಾಕ್ಷಾಯಿಣಿ ಎಸ್. ಅಪ್ಪಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಸತೀಶ ಎಲ್. ಜಾರಕಿಹೊಳಿ ಅವರಿಗೆ ಸಚಿವರು ಎಂಬ ಕಾರಣಕ್ಕೆ ಗೌರವ ಡಾಕ್ಟರೇಟ್ ನೀಡುತ್ತಿಲ್ಲ. ಅವರು ಕೈಗೊಂಡಿರುವ ಸಮಾಜ ಸೇವೆ ಪರಿಗಣಿಸಿ ನೀಡಲಾಗುತ್ತಿದೆ ಎಂದರು.

17 ಸಾವಿರ ವಿದ್ಯಾರ್ಥಿಗಳಿಗೆ ಪದವಿ: ಈ ಬಾರಿ ಒಟ್ಟು 17,348 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಈ ಪೈಕಿ 6,402 ಪುರುಷ ಮತ್ತು 10,946 ಮಹಿಳೆಯರು ಒಳಗೊಂಡಿದ್ದಾರೆ. ಒಟ್ಟು 15,409 ಮಹಿಳೆಯರು, 9700 ಪುರುಷರು ಪರೀಕ್ಷೆ ಎದುರಿಸಿದ್ದರು. ಒಟ್ಟಾರೆ ಶೇ.68.92 ಫಲಿತಾಂಶ ಬಂದಿದ್ದು, ಶೇ.65.75 ರಷ್ಟು, ಶೇ.70.92 ರಷ್ಟು ಮಹಿಳೆಯರು ತೇರ್ಗಡೆ ಹೊಂದಿದ್ದಾರೆ. ಈ ಬಾರಿ 17 ವಿದ್ಯಾರ್ಥಿನಿಯರು ಸೇರಿ 41 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪ್ರದಾನ ಮಾಡಲಾಗುವುದು. 54 ವಿದ್ಯಾರ್ಥಿಗಳು ಚಿನ್ನದ ಪದಕ ಹಾಗೂ 58 ವಿದ್ಯಾರ್ಥಿಗಳು ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ ಎಂದರು.

ಸಚಿವರಿಗೆ ಗೌರವ ಡಾಕ್ಟರೇಟ್ ಸಮರ್ಥನೆ:ಲೋಕೋಪೋಂಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ವಾಡುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಕುಲಪತಿ ಶರಣಪ್ಪ ವಿ. ಹಲಸೆ ಅವರು ಸಮರ್ಥಿಸಿಕೊಂಡರು.ರಾಜಕೀುಂದ ಕಾರಣಕ್ಕಾಗಲಿ, ಸಚಿವರು ಎಂಬ ಕಾರಣಕ್ಕೆ ಆಗಲಿ ನಾವು ಗೌರವ ಡಾಕ್ಟರೇಟ್ ನೀಡುತ್ತಿಲ್ಲ. ಬದಲಿಗೆ ಅವರ ಸವಾಜಪರ ಕಾಂರ್ುಕ್ರಮಗಳನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರದಾನ ವಾಡುತ್ತಿರುವುದಾಗಿ ಅವರು ಹೇಳಿದರು.

ಅರ್ಥಶಾಸ್ತ್ರದಲ್ಲಿ 9, ವಾಣಿಜ್ಯಶಾಸ್ತ್ರದಲ್ಲಿ 7, ರಾಜ್ಯಶಾಸ್ತ್ರ ಮತ್ತು ನಿರ್ವಹಣ ಶಾಸ್ತ್ರದಲ್ಲಿ ತಲಾ 6, ಕನ್ನಡ ವಿಷಯದಲ್ಲಿ 5, ಇತಿಹಾಸದಲ್ಲಿ 4, ಸೂಕ್ಷ್ಮಜೀವ ವಿಜ್ಞಾನದಲ್ಲಿ 2, ಇಂಗ್ಲಿಷ್ ಮತ್ತು ಆಹಾರ ವಿಜ್ಞಾನ ಮತ್ತು ಪೋಷಣೆ ವಿಷಯದಲ್ಲಿ ತಲಾ ಒಬ್ಬರು ಪಿಎಚ್‌ಡಿ ಪದವಿ ಪಡೆದಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಪರೀಕ್ಷಾಂಗ ಕುಲಸಚಿವ ಡಾ.ಎಚ್.ವಿಶ್ವನಾಥ್ ಇದ್ದರು.