ವಿಜಯಪುರ: ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಪ್ರತಿಯೊಬ್ಬ ಕಾರ್ಯಕರ್ತ ಮಾಡಬೇಕೆಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಅವರ ಅಹವಾಲು ಆಲಿಸಿ ಮಾತನಾಡಿದ ಅವರು, ಪಕ್ಷದ ಶಾಸಕರು ಮತ್ತು ಸಚಿವರು ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪ್ರತಿಯೊಬ್ಬರೂ ಜಿಲ್ಲಾ ಕಚೇರಿಗೆ ಭೇಟಿ ನೀಡಬೇಕೆಂದು ಆಶಿಸಿದರು.
ಶಾಸಕ ವಿಠಲ ಕಟಕದೊಂಡ, ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್, ಡಾ. ಗಂಗಾಧರ ಸಂಬಣ್ಣಿ, ವಿಜಯಕುಮಾರ ಘಾಟಗೆ, ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಸುಭಾಸ ಕಾಲೆಬಾಗ, ಎಂ.ಎಂ. ಮುಲ್ಲಾ (ದ್ಯಾಬೇರಿ), ದೇಸು ಚವಾಣ್, ಜಮೀರ್ ಬಕ್ಷಿ, ಶಹಜಾನ್ ಮುಲ್ಲಾ, ಸುರೇಶ ಹಾರವಾಳ, ಕಲ್ಲನಗೌಡ ಬಿರಾದಾರ, ಆರತಿ ಶಾಹಪೂರ, ಶಕೀಲ ಬಾಗಮಾರೆ, ಶ್ರೀದೇವಿ ಉತ್ಲಾಸರ, ಸಲೀಂ ಪೀರಜಾದೆ ಮತ್ತಿತರರಿದ್ದರು.