ಬೆಳಗಾವಿ: ಸಚಿವ ರಮೇಶ್ ಜಾರಕಿಹೊಳಿ ಬಾಲ್ಯ ಸ್ನೇಹಿತ ಎಸ್. ಎ. ಕೊತ್ವಾಲ್ ನಿಧನರಾಗಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕೊತ್ವಾಲ್ ಹಲವು ದಿನಗಳಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಗೋಕಾಕ್ನಲ್ಲಿ ಕೊತ್ವಾಲ್ ಗೌಡರು ಎಂದೇ ಖ್ಯಾತಿ ಹೊಂದಿದ್ದರು. ಬಾಲ್ಯದಿಂದಲೂ ಕೊತ್ವಾಲ್ ಹಾಗೂ ರಮೇಶ್ ಜಾರಕಿಹೊಳಿ ಒಡನಾಡಿಗಳಾಗಿದ್ದರು. ರಮೇಶ್ ಜಾರಕಿಹೊಳಿ ಉತ್ತುಂಗಕ್ಕೇರಲು ಶ್ರಮಿಸಿದ್ದರು.
ಸತತ 6 ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆ ಆಗಿದ್ದ ಕೊತ್ವಾಲ್ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಾಗಿದ್ದರು. ಇದೀಗ ಸ್ನೇಹಿತನ ಅಕಾಲಿಕ ನಿಧನದಿಂದ ರಮೇಶ್ ಜಾರಕಿಹೊಳಿ ಕಂಗಾಲಾಗಿದ್ದಾರೆ. (ದಿಗ್ವಿಜಯ ನ್ಯೂಸ್)