ಚಿಕ್ಕಬಳ್ಳಾಪುರ: ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಒಳ ಮೀಸಲಾತಿ ವರದಿಯನ್ನು ಎಲ್ಲರ ಅಭಿಪ್ರಾಯವನ್ನು ಪರಿಗಣಿಸಿ, ಜಾರಿಗೊಳಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಆದೇಶ, ಹೋರಾಟಗಾರರ ಒತ್ತಡದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಜಾರಿಗೆ ಹಿನ್ನೆಲೆಯಲ್ಲಿ ಸಮೀಕ್ಷೆಗೆ ಆಯೋಗವನ್ನು ರಚಿಸಲಾಗಿತ್ತು. ಇದು ಈಗಾಗಲೇ ವರದಿಯನ್ನು ಸಲ್ಲಿಸಿದೆ. ಇದರ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆಯಾಗಲಿದ್ದು ಸಾಧಕ ಬಾಧಕಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನದ ನಿರ್ಣಯವನ್ನು ಮುಖ್ಯಮಂತ್ರಿ ಘೋಷಿಸಲಿದ್ದಾರೆ ಎಂದು ತಿಳಿಸಿದರು.
*ಸಚಿವರ ತಲೆದಂಡ ವಿವಾದವಲ್ಲ
ಪಕ್ಷದ ಹೈಕಮಾಂಡ್ ಯಾರನ್ನಾದರೂ ಸಚಿವ ಸಂಪುಟದಿಂದ ಕೈ ಬಿಡಲು ಆದೇಶಿಸಿದಾಗ ಮುಖ್ಯಮಂತ್ರಿಗಳು ಪಾಲಿಸುತ್ತಾರೆ. ಸಚಿವ ಸ್ಥಾನ ಬಿಟ್ಟು ಕೊಡಲು ಹೇಳಿದರೆ ನಾನು ರೆಡಿ ಇರಬೇಕಾಗುತ್ತದೆ. ಹಾಗೆಯೇ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ.
ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಇದನ್ನು ಕೇವಲ ವಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಆದರೆ, ತಲೆದಂಡಕ್ಕೊಳಗಾದರೂ ಸ್ವಪಕ್ಷೀಯ ನಾಯಕರು ಹೇಳಿದಂತೆ ನಡೆದುಕೊಳ್ಳುವುದಾಗಿ ಸ್ವತಃ ರಾಜಣ್ಣ ಹೇಳಿರುವಾಗ ಬೇರೆಯವರ ಚರ್ಚೆ ಅನವಶ್ಯಕ ಎಂದು ಸಚಿವರು ತಿಳಿಸಿದರು.