ಜಿಲ್ಲೆ

"ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ಗೆ ನಮ್ಮಿಬ್ಬರ ವಿರೋಧ ಇದೆ'

ತುಮಕೂರು: ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಯೋಜನೆಗೆ ನಾನು ಹಾಗೂ ಡಾ.ಜಿ.ಪರಮೇಶ್ವರ್​ ಇಬ್ಬರೂ ವಿರೋಧ ಇದ್ದೇವೆ ಎಂದು ಸಹಕಾರ ಸಚಿವ ಕೆ.ಎನ್​.ರಾಜಣ್ಣ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸ್​ಪ್ರೆಸ್​ ಕೆನಾಲ್​ ವಿರುದ್ಧ ಎಲ್ಲಿ ಗಟ್ಟಿ ಧ್ವನಿಯಲ್ಲಿ ಮಾತಾಡಬೇಕೋ ಅಲ್ಲಿ ಇಬ್ಬರೂ ಮಾತನಾಡಿದ್ದೇವೆ. ನಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದೇವೆ. ಏನೇ ಕಾಮಗಾರಿಯಾದರೂ ನೀರು ಹರಿಯಲು ನಾವು ಬಿಡುವುದಿಲ್ಲ. ಪೈಪ್​ ಲೈನ್​ ಹಾಕಿದರೆ ಅದಕ್ಕೆ ನೀರು ಬಿಡಬೇಕಾಗಿರುವುದು ಈ ಭಾಗದಲ್ಲೇ. ಅದು ಅವರಿಗೆ ಗೊತ್ತಿರಲಿ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್​ಗೆ ಟಾಂಗ್​ ಕೊಟ್ಟರು.