RAICHUR 
ಜಿಲ್ಲೆ

ಶ್ರೀಶೈಲ ಭಕ್ತಾದಿಗಳಿಗೆ ಅನ್ನ ದಾಸೋಹ- ಸಚಿವ ಭಾಗಿ

ರಾಯಚೂರು ಯುಗಾಗಿ ಹಬ್ಬದ ನಿಮಿತ್ತ ಶ್ರೀಶೈಲ ಭಕ್ತಾದಿಗಳಿಗೆ ಅನ್ನ ದಾಸೋಹ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರು ಸೋಮವಾರ ಭಾಗವಹಿಸಿ ಶ್ರೀಶೈಲ ಭಕ್ತಾದಿಗಳಿಗೆ ಪ್ರಸಾದ ಬಡಿಸಿದರು.

ನಗರದ ಹೊರ ಹೊಲಯದ ಮುಗಲಖೋಡ ಯಲ್ಲಾಲಿಂಗ ಮಠದ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ನಂದೀಶ್ವರ ದೇವಸ್ಥಾನ ಸಮಿತಿ, ಮುಗಳಖೋಡ ಜಿಡಗಾ ಮಠದಲ್ಲಿನ ಶ್ರೀಶೈಲ ಭಕ್ತಾದಿಗಳಿಗೆ ಅನ್ನದಾಸೋಹ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪೂರ, ಕಾಂಗ್ರೆಸ ಮುಖಂಡರಾದ ಕೆ.ಶಾಂತಪ್ಪ, ಜಯಣ್ಣ ,ಜೆ.ಶಿವಮೂರ್ತಿ, ಅಮರೇಗೌಡ ಹಂಚಿನಾಳ, ಕರಿಯಪ್ಪ ಜೆಇ ಸೇರಿದಂತೆ ಶ್ರೀಶೈಲ ಭಕ್ತಾದಿಗಳು ಇದ್ದರು.