ಜಿಲ್ಲೆ

ಕರ್ನಾಟಕದ ರಾಜಕಾರಣಕ್ಕೆ ಹೊಸ ದಿಕ್ಕು

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಕರ್ನಾಟಕದ ರಾಜಕಾರಣ ಹೊಸ ದಿಕ್ಕನ್ನ ಪಡೆದುಕೊಳ್ಳುತ್ತಿದೆ. ಜಾತಿ ಗಣತಿ ದೇಶಕ್ಕೆ ಒಂದು ಮಾದರಿ ತೀರ್ಮಾನ ಆಗಲಿದೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿರುವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಜಾತಿ ಗಣತಿಯನ್ನು ಸಮರ್ಥಿಸಿಕೊಂಡರು.

ನಗರದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಕುರುಬ ಸಾಂಸ್ಕೃತಿಕ ಪರಿಷತ್​ ವತಿಯಿಂದ ಆಯೋಜಿಸಿರುವ 2 ದಿನಗಳ ಕುರುಬ ಸಾಹಿತ್ಯ- ಸಾಂಸ್ಕೃತಿಕ ಸಮ್ಮೇಳನಕ್ಕೆ ಶನಿವಾರ ಭಾಗವಹಿಸಿ ಮಾತನಾಡಿದ ಅವರು, ಆಧುನಿಕ ರಾಜಕಾರಣದಲ್ಲಿ ಸಿದ್ದರಾಮಯ್ಯರನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರು 16 ಬಾರಿ ಬಜೆಟ್​ ಮಂಡಿಸಿದ್ದಾರೆ ಅನ್ನುವುದಲ್ಲಿ ಬಡವರು, ಶೋಷಿತರ ಬಗ್ಗೆ ಅವರಿಗಿರುವ ಕಳಕಳಿ ಅವರನ್ನು ವಿಭಿನ್ನ ಸಾಲಿನಲ್ಲಿ ನಿಲ್ಲಿಸಿದೆ. ಕುರುಬ ಸಮುದಾಯ ಹಾಗೂ ರಾಜ್ಯಕ್ಕೆ ಸಿದ್ದರಾಮ್ಯರ ಕೊಡುಗೆ ಅಪಾರ ಎಂದು ಕೊಂಡಾಡಿದರು.

ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್​.ಹುಲಿನಾಯ್ಕರ್​, ಪತ್ರಿಕೋದ್ಯಮಿ ಎಸ್​.ನಾಗಣ್ಣ, ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ, ಶ್ರೀದೇವಿ ಶಿಕ್ಷಣ ಸಂಸ್ಥೆ ಟ್ರಸ್ಟಿ ಡಾ.ರಮಣ್​ ಹುಲಿನಾಯ್ಕರ್​, ಇನ್​ ಸೈಟ್​ ಸಂಸ್ಥೆಯ ಜಿ.ಬಿ.ವಿನಯಕುಮಾರ್​ ಉಪಸ್ಥಿತರಿದ್ದರು.

ಹಿಂದುಳಿದ ವರ್ಗಗಳಲ್ಲಿ ಕುರುಬರು ದೊಡ್ಡಣ್ಣ ಇದ್ದಂತೆ. ಸಿದ್ದರಾಮಯ್ಯ ಒಂದು ಜಾತಿಗೆ ಸೀಮಿತವಾಗಿಲ್ಲ. ಜಾತಿ ಗಣತಿ ಅವೈಜ್ಞಾನಿಕ ಅಂತ ಯಾಕೆ ಉಪಯೋಗಿಸುತ್ತಾರೋ ಗೊತ್ತಿಲ್ಲ. ಅದು ವೈಜ್ಞಾನಿಕ ದತ್ತಾಂಶದಿಂದ ಕೂಡಿದೆ. ಈ ರಾಜ್ಯದ ಶೋಷಿತರ ಬೆಂಬಲ ಇದೆ. ಕೆಲವು ಜನ ಪೂರ್ಣಪ್ರಮಾಣದ ಅರಿವಿಲ್ಲದೆ ಮಾತನಾಡುತ್ತಿದ್ದಾರೆ, ಯಾವ ಜಾತಿಗು ಅನ್ಯಾಯವಾಗಿಲ್ಲ. ಶೇ.52ರಷ್ಟು ಜನಸಂಖ್ಯೆ ಹಿಂದುಳಿದವರಿದ್ದರು ಶೇ.32ರಷ್ಟು ಮೀಸಲು ಪ್ರಮಾಣ ಸಿಕ್ಕುತ್ತಿದೆ. ಎಚ್​.ಎಂ.ರೇವಣ್ಣ ಅಧ್ಯಕ್ಷ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ