ತುಮಕೂರು: ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಹೆಗ್ಗೆರೆ ಗ್ರಾಮದಲ್ಲಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ನೇತೃತ್ವದಲ್ಲಿ ಸಚಿವ ಡಾ.ಜಿ.ಪರಮೇಶ್ವರ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಹೆಗ್ಗೆರೆ ಸರ್ಕಲ್ನಲ್ಲಿ ಪಟಾಕಿ ಸಿಡಿಸಿ ಪರಮೇಶ್ವರ್ರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬೃಹತ್ ಕ್ರೇನ್ ಮೂಲಕ 50 ಸಾವಿರ ಮೌಲ್ಯದ ಬೃಹತ್ ಕೊಬ್ಬರಿ ಹಾರ ಹಾಕಿ ಅಭಿನಂದಿಸಲಾಯಿತು.
74 ಕೆಜಿ ತೂಕದ ಕೇಕ್: 73ನೇ ವಸಂತ ತುಂಬಿ 74ನೇ ವರ್ಷಕ್ಕೆ ಕಾಲಿಡುತ್ತಿರುವ ಪರಮೇಶ್ವರ್ ಜನ್ಮದಿನದ ಅಂಗವಾಗಿ 74 ಕೆಜಿ ಬೃಹತ್ ಕೇಕ್ ಅನ್ನು ನಿರ್ಮಿಸಿದ್ದು ಗೌರಿಶಂಕರ್, ಪಾಲನೇತ್ರಯ್ಯ, ದೇವರಾಜು ಸೇರಿದಂತೆ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಕತ್ತರಿಸಲಾಯಿತು. ಈ ವೇಳೆ ಪರಂಗೆ 4 ಲ್ಷ ಮೌಲ್ಯದ ಬೆಳ್ಳಿ ಕಿರೀಟ ತೊಡಿಸಿ ಕತ್ತಿ ನೀಡಿ ಗೌರಿಶಂಕರ್ ಸನ್ಮಾನಿಸಿದರು.
ಈ ವೇಳೆ ಸಚಿವ ಪರಮೇಶ್ವರ್ ಮಾತನಾಡಿ, ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಸದಾಚಿರರುಣಿ ,ನೀವು ಈ ಬಾರಿ ಸ್ವಲ್ಪ ಯಾಮಾರಿದ್ದೀರಾ ಇಲ್ಲದಿದ್ದರೆ ಗೌರಿಶಂಕರ್ ಶಾಸಕರಾಗುತ್ತಿದ್ದರು. ಮುಂದಿನ ಬಾರಿ ಯಾಮಾರಬೇಡಿ ಎಂದು ಮನವಿಮಾಡಿದರು.