ಜಿಲ್ಲೆ

ನಮ್ಮ ಸರ್ಕಾರದಲ್ಲಿ ಜಾತಿ ಆಧರಿಸಿ ಪೋಸ್ಟಿಂಗ್ ನೀಡೋಲ್ಲ !

ತುಮಕೂರು: ಜಾತಿ ಆಧಾರದ ಮೇಲೆ ಅಧಿಕಾರಿಗಳನ್ನು ಹುದ್ದೆಗಳಿಗೆ ನಿಯೋಜನೆಯನ್ನು ನಮ್ಮ ಸರ್ಕಾರ ಮಾಡೋದಿಲ್ಲ. ಯಾರೂ ಸಮರ್ಥರಿದ್ದಾರೆ, ಪ್ರಾಮಾಣಿಕರಿದ್ದಾರೆ ಅಂತವರನ್ನು ಪರಿಗಣಿಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.

ಲಿಂಗಾಯತರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಬೆಲೆ ಸಿಗುತ್ತಿಲ್ಲವೆಂದು ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅಸಮಾಧಾನ ಹೊರಹಾಕಿರುವ ಬಗ್ಗೆ ತುಮಕೂರಿನಲ್ಲಿ ಶನಿವಾರ ಪತ್ರಕರ್ತರ ಪಶ್ನೆಗೆ ಪ್ರತಿಕ್ರಿಯಿಸಿದ ಪರಂ, ಅದನ್ನೆಲ್ಲ ಮುಖ್ಯಮಂತ್ರಿಗಳು ಗಮನಿಸುತ್ತಾರೆ. ಅಂತಹದ್ದೇನಾದರೂ ಇದ್ದರೆ ಸರಿಪಡಿಸಿಕೊಳ್ತೀವಿ ಎಂದರು.

ಜನರ ಪರವಾಗಿ ಕೆಲಸ ಮಾಡುವ, ಸರ್ಕಾರದ ಯೋಜನೆಗಳನ್ನ ಜನರಿಗೆ ತಲುಪಿಸುವ ಸಮರ್ಥ, ದಕ್ಷ ಅಧಿಕಾರಿಗಳನ್ನು ನಮ್ಮ ಸರ್ಕಾರ ಸೂಕ್ತ ಹುದ್ದೆಗಳಿಗೆ ನಿಯೋಜನೆ ಮಾಡುತ್ತದೆ. ಜಾತಿ ಪರಿಗಣಿಸುವುದಿಲ್ಲ. ಜಾತಿ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯುತ್ತೆ. ಆದರೆ, ಕೆಲಸ ಕೊಡುವಾಗ, ಜಾತಿ ಆಧಾರದ ಮೇಲೆ ಹುದ್ದೆ ತೋರಿಸುವುದಿಲ್ಲ ಎಂದು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.