ರಾಯಚೂರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂತ್ರಾಲಯ ,ರಾಯಚೂರಿನಲ್ಲಿ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದಕ್ಕೆ ಯಾವುದೇ ರಾಜಕೀಯ ವಿಶೇಷತೆಯಿಲ್ಲಾವೆಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆ.ಶಿವಕುಮಾರ ಅವರು ಬಹುದಿನಗಳಿಂದ ರಾಯರ ಆರ್ಶಿವಾದ ಪಡೆಯಲು ಮಂತ್ರಾಲಯಕ್ಕೆ ಬರಬೇಕೆಂದು ಅಂದುಕೊಂಡಿದ್ದರು. ಅದರಿಂದ ಅ.22 ರಂದು ರಾಯರ ದರ್ಶನಕ್ಕೆ ಬರುತ್ತಿದ್ದಾರೆ, ಡಿಕೆಶಿಯವರು ದೈವ ಭಕ್ತಿ ಇರುವಂತವರು ಎಲ್ಲಾ ಸಂದರ್ಭದಲ್ಲೂ ದೇವಾಲಯಗಳಿಗೆ ಹೋಗುತ್ತಾರೆ. ಕಳೆದ ತಿಂಗಳು ಮಂಗಳೂರು ಕಡೆ ಅಲ್ಲಿನ ದೇವಾಲಯಗಳಿಗೆ ಹೋಗಿ ಬಂದರು. ರಾಘವೇಂದ್ರ ಸ್ವಾಮಿಗೆ ಮೊದಲಿನಿಂದಲೂ ನಡೆದು ಕೊಂಡು ಬಂದಿದ್ದಾರೆ.
ಹಬ್ಬದ ರಜೆಯಿದೆ ಸಮಯ ಸಿಕ್ಕಿದೆ ಹೀಗಾಗಿ ದರ್ಶನಕ್ಕೆ ಬರುತ್ತಿದ್ದಾರೆ. ಪಂಚಮುಖಿ ಗಾಣಧಾಳ ಹಾಗೂ ಬಿಚ್ಚಾಲಿ ದೇವಾಲಯಗಳಿಗೂ ಭೇಟಿ ನೀಡುತ್ತಾರೆ ಬೇರೆ ಯಾವುದೇ ವಿಶೇಷತೆ ಇಲ್ಲ ಎಂದರು.
ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ನವೆಂಬರ್ ಕ್ರಾಂತಿ ಇಲ್ಲಾ. ರಾಜಣ್ಣನವರು ಸೆಪ್ಟೆಂಬರ್ ಕ್ರಾಂತಿ ಹೇಳಿದ್ದರು. ಸೆಪ್ಟೆಂಬರ್ ಹೋಗಿ ಅಕ್ಟೋಬರ್ ಬಂದಿದೆ ಯಾವ ಕ್ರಾಂತಿಯಿಲ್ಲ ನಡೆದಿಲ್ಲ. ಯಾವ ಪಕ್ಷದಲ್ಲಿ ಯಾವ ಕ್ರಾಂತಿ ಅಂತನೂ ಸ್ಪಸ್ಟನೆ ನೀಡಿಲ್ಲ ಎಂದರು.