ರಾಯಚೂರು ನಗರದಲ್ಲಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ರಾಂಪೂರು ಬಳಿಯಿರುವ ೧೦
ಎಕರೆಯಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಲು ಮತ್ತು ಗುರುತ್ವಾಕರ್ಷಣೆ(ಗ್ರಾವಿಟೀ) ಮೂಲಕ ಕೆರೆ ತುಂಬಿಸಲು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹಾಗೂ ನಗರ ಶಾಸಕ ಡಾ.ಶಿವರಾಜ
ಪಾಟೀಲ್ ಕೆರೆಗೆ ಮಂಗಳವಾರ ಭೇಟಿ ನೀಡಿ ಪರೀಶಿಲನೆ ನಡೆಸಿದರು.
ನಂತರ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಗಣೇಕಲï ನೀರು ಸಂಗ್ರಹ ಕೇಂದ್ರದಿAದ ಪ್ರತಿ ಬಾರಿ ಕೆನಾಲಗೆ ನೀರು ಬಂದಾಗ ಕೆರೆಗಳನ್ನು ತುಂಬಿಸುವ ಬದಲಾಗಿ ಗ್ರಾ÷್ಯವಿಟಿ ಮೂಲಕ ಕೆರೆಗಳಿಗೆ ನೀರು ತುಂಬಿಸುವುದು ಉತ್ತಮ. ಹೀಗಾಗಿ ಈ ಪ್ರದೇಶದಲ್ಲಿ ಹೊಸದಾಗಿ ಗ್ರಾ÷್ಯವಿಟಿ ರಿಸರ್ವರï ನಿರ್ಮಾಣ ಮಾಡುವುದರ ಬಗ್ಗೆ ಪರಿಶೀಲಿಸಬೇಕು.ಹಳೆಯ ಕೆರೆಯಲ್ಲಿನ ಹೂಳು ಎತ್ತಿ ಅಲ್ಲಿನ ಮಣ್ಣನ್ನು ಪರೀಕ್ಷೆಗೊಳಪಡಿಸಿ ತಜ್ಞರ ವರದಿ ಪಡೆದು ನೀರು ಶೇಖರಣೆ ಮಾಡಿದಲ್ಲಿ ನೀರು ಸಂಗ್ರಹವಾಗಿ ಬೇಸಿಗೆಯ ಸಮಯದಲ್ಲಿ ೧೩ ವಾರ್ಡಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗುತ್ತದೆ. ಅದ್ದರಿಂದ ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಆಽಕಾರಿಗಳಿಗೆ ನಿರ್ದೇಶನ ನೀಡಿದರು.
ಹೆಚ್ಚುವರಿ ಪಂಪï ಅಳವಡಿಸಿ ನೀರಿನ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಆರೋಗ್ಯ ಇಲಾಖೆ ಮತ್ತು ಕೃಷಿ ಇಲಾಖೆಯಿಂದ ಲ್ಯಾಬï ಪರೀಕ್ಷೆ ನಡೆಸಬೇಕು ಎಂದರು.
ನAತರ ಜಲಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ,ಅಲ್ಲಿನ ಪ್ರಯೋಗಾಲಯ, ಕ್ಲಾ÷್ಯರಿಪೈರï, ಕೆಮಿಕಲï ಹೌಸï, ನೀರು ಶುದ್ದೀಕರಣ ಘಟಕದ ವೀಕ್ಷಣೆ ನಡೆಸಿದರು.
ಈ ಸಂದರ್ಭದಲ್ಲಿ ಜಿ¯್ಲÁಽಕಾರಿಗಳಾದ ನಿತೀಶï ಕೆ., ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ ಮೋಹಪತ್ರ, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಗುರುಸಿದ್ದಯ್ಯ ಹಿರೇಮಠ, ಮುಖಂಡರಾದ ಜಯಣ್ಣ, ಕೆ ಶಾಂತಪ್ಪ, ಜಿ ಶಿವಮೂರ್ತಿ, ಮಾಡಗೇರಿ ನರಸಿಂಹಯ್ಯ, ಗುಡಸಿ ತಿಮ್ಮಾರೆಡ್ಡಿ, ಬಿ ರಮೇಶ, ಬಸವರಾಜ ಪಾಟೀಲ ಅತ್ತನೂರು ಸೇರಿ ಅನೇಕರು ಇದ್ದರು.