ಸಿರವಾರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಿದರು. ಶಾಸಕ ಜಿ.ಹಂಪಯ್ಯ ನಾಯಕ, ತಹಸೀಲ್ದಾರ್ ರವಿ ಎಸ್. ಅಂಗಡಿ, ಸಿಪಿಐ ಶಶಿಕಾಂತ ಎಂ., ತಾಪಂ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಶರ್ಫನಿಸಾ ಬೇಗಂ, ಸಿಡಿಪಿಒ ನಾಗರತ್ನ ನಾಯಕ, ಪಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಇನ್ನಿತರರಿದ್ದರು. 
ಜಿಲ್ಲೆ

ಸುದ್ದಿಯಲ್ಲಿ ಸತ್ಯಕ್ಕೆ ಪ್ರಾಮುಖ್ಯ ನೀಡಿ

ಸಿರವಾರ: ಪತ್ರಕರ್ತರು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಾಗ ಎದೆ ಗುಂದಬಾರದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಅವರಸರಲ್ಲಿ ಮತ್ತು ಸ್ಪೋಟಕ ಸುದ್ದಿ ಎಂಬ ದಾವಂತ ಬೇಡ

ಪಟ್ಟಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಸಮಾಜದಲ್ಲಿ ಪತ್ರಕರ್ತರ ಮೇಲೆ ದೊಡ್ಡ ಜವಾಬ್ದಾರಿಯಿದೆ. ಅವರಸರಲ್ಲಿ ಮತ್ತು ಸ್ಪೋಟಕ ಸುದ್ದಿ ಎಂಬ ದಾವಂತದಲ್ಲಿ ಸತ್ಯಕ್ಕೆ ಪ್ರಾಮುಖ್ಯ ನೀಡಬೇಕು ಎಂದು ಹೇಳಿದರು.

ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಪತ್ರಿಕಾ ರಂಗದ ಮೇಲಿನ ನಂಬಿಕೆಯನ್ನು ಪತ್ರಕರ್ತರು ಉಳಿಸಿಕೊಳ್ಳಬೇಕು. ಅವರು ಸಮಾಜದಲ್ಲಿನ ಸಮಸ್ಯೆಗಳನ್ನು ಗುರುತಿಸಿ ಸಾಮಾನ್ಯ ಜನರ ದನಿಯಾಗಬೇಕು. ಜನಪ್ರತಿನಿಧಿ, ಸರ್ಕಾರವನ್ನು ಎಚ್ಚರಿಸುವ ಸುದ್ದಿಗಳನ್ನು ಪ್ರಕಟಿಸಬೇಕು. ಪತ್ರಕರ್ತರು ನೈಜ, ಶುದ್ಧ ನಡೆ-ನುಡಿಯಿಂದ ಕರ್ತವ್ಯ ನಿರ್ವಹಿಸಲಿ ಎಂದರು.

ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿ, ತಾಲೂಕಿನಲ್ಲಿ ಪತ್ರಕರ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪತ್ರಿಕಾ ಭವನಕ್ಕೆ ಸ್ಥಳ ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘಕ್ಕೆ ಸ್ಥಳವನ್ನು ಹಸ್ತಾಂತರಿಸಿ ಪತ್ರಿಕಾ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪ್ರಶಸ್ತಿ ಪುರಸ್ಕೃತ ಅರಳಯ್ಯಗೆ ಗೌರವಿಸಲಾಯಿತು. ತಹಸೀಲ್ದಾರ್ ರವಿ ಎಸ್.ಅಂಗಡಿ, ಸಿಪಿಐ ಶಶಿಕಾಂತ ಎಂ., ತಾಪಂ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಶರ್ಫನಿಸಾ ಬೇಗಂ, ಸಿಡಿಪಿಒ ನಾಗರತ್ನ ನಾಯಕ, ಪಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಹಿರಿಯ ವರದಿಗಾರರಾದ ನಾಗರಾಜ ಎನ್., ಜಿಲ್ಲಾ ಸಮಿತಿ ಸದಸ್ಯ ಹುಸೇನಬಾಷಾ ಕವಿತಾಳ, ಮಾನ್ವಿ ಘಟಕದ ಅಧ್ಯಕ್ಷ ನಾಗರಾಜ ತಡಕಲ್, ಸಿರವಾರ ತಾಲೂಕು ಘಟಕದ ಅಧ್ಯಕ್ಷ ಎಂ.ಗುಂಡಪ್ಪ, ಪ್ರಧಾನ ಕಾರ್ಯದರ್ಶಿ ವೀರೇಶ ಹರಕಂಚಿ ಇನ್ನಿತರರಿದ್ದರು.