ಮುದ್ದೇಬಿಹಾಳ: ವಿಧಾನ ಪರಿಷತ್ ವಿಪ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವ ಸಚಿವ ಎಂ.ಬಿ. ಪಾಟೀಲ ಅವರ ನಡೆಯನ್ನು ಬಿಜೆಪಿ ಎಸ್ಸಿ ಮೋರ್ಚಾ ಸಾಮಾಜಿಕ ಜಾಲತಾಣದ ರಾಜ್ಯ ಸಂಚಾಲಕ ಮಂಜುನಾಥ ಛಲವಾದಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾರಾಯಣಸ್ವಾಮಿ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಅವರ ನತೆ ಲೆಕ್ಕಿಸದೆ ಸಚಿವರು ಕುಚೋದ್ಯದ ಪದಗಳನ್ನು ಬಳಸಿದ್ದಾರೆ. ಇದು ಸಚಿವರಿಗೆ ಪದ ಬಳಕೆಯ ಸಂಸತಿ ಇಲ್ಲ ಅನ್ನೋದನ್ನು ತೋರಿಸಿ, ಅವರ ವ್ಯಕ್ತಿತ್ವ ಎಂಥದ್ದು ಅನ್ನೋದನ್ನು ಅವರೇ ಅನಾವರಣ ಮಾಡಿಕೊಂಡಂತಾಗಿದೆ ಎಂದಿದ್ದಾರೆ.
ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳಿರಬೇಕು ಅದರಲ್ಲೂ ಆಡಳಿತ ಪದಲ್ಲಿರುವವರು ವಿರೋಧ ಪದ ಟೀಕೆಗಳನ್ನು ಸಕಾರಾತ್ಮಕ ಮನಸ್ಸಿನಿಂದ ಸ್ವೀಕರಿಸುವ ಔದಾರ್ಯ ತೋರಬೇಕು. ಆದರೆ ಹತಾಶೆಗೊಳಗಾದವರಂತೆ ವರ್ತಿಸುವುದು ಪ್ರಜಾತಂತ್ರ ವ್ಯವಸ್ಥೆಯನ್ನು ಅಪಮಾನಿಸಿದಂತೆ.
ಚಿವರು ತಮ್ಮ ಮಾತುಗಳಿಗೆ ನಾರಾಯಣಸ್ವಾಮಿಯವರು ಹಾಗೂ ಸಮುದಾಯದವರ ಮೆಯಾಚಿಸಬೇಕು. ಇಲ್ಲವಾದಲ್ಲಿ ಸಚಿವರ ಮನೆಗೆ ಮುತ್ತಿಗೆ ಹಾಕುವುದು, ಪ್ರವಾಸದ ವೇಳೆ ಕಪ್ಪು ಬಾವುಟ ತೋರಿಸುವುದು, ಮುಂಬರುವ ಚುನಾವಣೆಯಲ್ಲಿ ಬಬಲೇಶ್ವರ ಮತೇತ್ರದಲ್ಲಿ ಪರಿಶಿಷ್ಟ ಸಮುದಾಯದವರು ಸರಿಯಾದ ಉತ್ತರ ಕೊಡುವಂತೆ ಮಾಡುವುದು ಮುಂತಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.