ಜಿಲ್ಲೆ

ಕಾಳಿ, ಶರಾವತಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜಲಸಾರಿಗೆ : ಂಕಾಳ ವೈದ್ಯ

ಕಾರವಾರ: ಶರಾವತಿ, ಕಾಳಿ ನದಿಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜಲಸಾರಿಗೆ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.

ಸ್ವಾತಂತ್ರೊತ್ಸವ ಸಮಾರಂಭದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈಗಾಗಲೇ ಕಾಳಿಯಲ್ಲಿ ತೇಲುವ ಜಟ್ಟಿ ನಿರ್ಮಾಣ ಮಾಡಲಾಗಿದೆ. ಶರಾವತಿ ನದಿಯಲ್ಲಿ ಜಟ್ಟಿ ನಿರ್ಮಾಣ ಶೀಘ್ರ ನಡೆಯಲಿದೆ ಎಂದರು. ಪ್ರವಾಸೋದ್ಯಮ ಹಾಗೂ ಸಂಪರ್ಕಕ್ಕೆ ಅನುಕೂಲವಾಗುವಂತೆ ಒಳನಾಡು ಜಲಸಾರಿಗೆ ಅಭಿವೃದ್ಧಿಗೆ ಯೋಜಿಸಿದ್ದೇವೆ ಎಂದರು.

ಚೆನ್ನೈ ಎನ್‌ಸಿಎಸ್‌ಸಿಎಂನಿಂದ ಕರ್ನಾಟಕದ ಕಡಲ ತೀರದ ಸರ್ವೇ ಕಾರ್ಯ ನಡೆಸಿ ವರದಿ ಪಡೆಯಲಾಗಿದೆ. ಗೋವಾದಿಂದ ಕಾಸರಕೋಡಿನವರೆಗೆ ಕರ್ನಾಟಕದ ಕಡಲ ತೀರದ ಉದ್ದ ಒಟ್ಟು 343 ಕಿಮೀ ಇದೆ ಎಂಬುದು ಗೊತ್ತಾಗಿದೆ. ಕಡಲ ತೀರದಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲಕರವಾದ ಚಟುವಟಿಕೆ ಕೈಗೊಳ್ಳಲು ನಾವು ಕ್ರಮ ವಹಿಸುತ್ತಿದ್ದೇವೆ ಎಂದರು.

ಪಂಪ್ಡ್ ಸ್ಟೊರೇಜ್ ಯೋಜನೆಗೆ ವಿರೋಧ

ಶರಾವತಿ ಪಂಪ್ಡ್ ಸ್ಟೊರೇಜ್ ಯೋಜನೆಗೆ ನನ್ನ ವಿರೋಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪುನರುಚ್ಛಾರ ಮಾಡಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಕೊರತೆ ಇದೆ. ವಿದ್ಯುತ್ ನೀಡಬೇಕು ಎಂದರೆ ಹೊಸ ಯೋಜನೆಗಳನ್ನು ತರಬೇಕು ಎಂಬುದು ನನಗೆ ತಿಳಿದಿದೆ. ಆದರೆ, ನಾನು ಕ್ಷೇತ್ರದ ಜನರ ಜತೆಗೆ ಇದ್ದೇನೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಂಕಣ ರೈಲ್ವೆ, ಹೆದ್ದಾರಿ, ನೌಕಾಸೇನೆ ಹೀಗೆ ವಿವಿಧ ಯೋಜನೆಗಳಿಗೆ ಜನ ಜಮೀನು ನೀಡಿದ್ದಾರೆ. ಈಗ ಮತ್ತೆ ಜನ ಮನೆ, ಮಠ ಕಳೆದುಕೊಳ್ಳುತ್ತಾರೆ. ಹಾಗಾಗಿ ನಾನು ಜನರ ಜತೆಗೆ ಇದ್ದೇನೆ ಎಂದರು. ಶರಾವತಿ ಜಲವಿದ್ಯುತ್ ಯೋಜನೆಗೆ ಕೇಂದ್ರ ಅರಣ್ಯ ಮಂತ್ರಾಲಯದ ಅನುಮತಿ ಸಿಕ್ಕಿದೆ ಎಂದರು.

ಭಟ್ಕಳ ನಗರಸಭೆಗೆ ಜನರ ವಿರೋಧ ಇಲ್ಲ

ಭಟ್ಕಳ ನಗರಸಭೆ ಮಾಡುವುದನ್ನು ವಿರೋಧ ಮಾಡಿದವರು ಈ ಕ್ಷೇತ್ರವನ್ನು ಐದು ವರ್ಷ ಆಳಿದವರು. ಸಾಮಾನ್ಯ ಜರ‍್ಯಾರೂ ಅದನ್ನು ವಿರೋಧ ಮಾಡಿಲ್ಲ ಎಂದು ಮಂಕಾಳ ವೈದ್ಯ ಹೇಳಿದರು. ಧರ್ಮ, ಜಾತಿಯ ಆಧಾರದ ಮೇಲೆ ನಗರಸಭೆ, ಪುರಸಭೆ ಮಾಡುವ ವ್ಯವಸ್ಥೆ ಭಾರತದಲ್ಲಿಲ್ಲ. ಭಟ್ಕಳ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ವಹಿಸಿದ್ದೇನೆ. ಬೇರೆ ಗ್ರಾಮ ಪಂಚಾಯಿತಿಗಳನ್ನೂ ಬೇಕಾದರೆ ಮುಂದೆ ಸೇರಿಸಬಹುದು ಎಂದರು.

ಕಂಪನಿ ಬೇರೆ ಕಡೆ ಹೋದರೇನು ಮಾಡುವುದು..?

ದೇಶದಲ್ಲಿ ಅತಿ ಹೆಚ್ಚು ಉದ್ದದ ಕಡಲ ತೀರ ಹೊಂದಿದ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಆದರೆ, ರಾಜ್ಯದಲ್ಲಿ ನವ ಮಂಗಳೂರು ಬಂದರು ಬಿಟ್ಟರೆ ಬೇರೆ ಯಾವುದೇ ಬೃಹತ್ ಬಂದರುಗಳಿಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟು ಅಧ್ಯಯನ ಮಾಡಿ ಯೋಜನೆ ಜಾರಿ ಮಾಡಲು ಮುಂದಾಗಿದ್ದೇವೆ. ಸಮುದ್ರದ ನಡುವೆ ಬರ್ತ್ ನಿರ್ಮಾಣಕ್ಕೆ ಜಾಗ ನೀಡಿದ್ದೇವೆ. ಮೀನುಗಾರರ ಜಾಗ ಸ್ವಾಽÃನವಾಗುವುದಿಲ್ಲ. ಮೀನುಗಾರಿಕೆಗೂ ತೊಂದರೆಯಾಗುವುದಿಲ್ಲ. ಮೀನುಗಾರರಿಗೆ ತೊಂದರೆಯಾದರೆ ನಾನೂ ಯೋಜನೆಯನ್ನು ವಿರೋಧ ಮಾಡುತ್ತೇನೆ ಎಂದರು.

ರಸ್ತೆ, ರೈಲು ಮುಂತಾದ ಸೌಕರ್ಯಕ್ಕಾಗಿ ಸುಮಾರು 100 ಎಕರೆ ಜಾಗ ಸ್ವಾಽÃನ ಮಾಡಿಕೊಡುತ್ತಿದ್ದೇವೆ. ಅದಕ್ಕೆ ಸೂಕ್ತ ಪರಿಹಾರ ಹೆಚ್ಚುವರಿ ಭೂಮಿ ಬೇಕಾದರೆ ಅವರು ಖರೀದಿಸಬಹುದು. ಕಾಮಗಾರಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವಂತೆ ಸೂಚಿಸಿದ್ದೇವೆ. ಕಂಪನಿ 3 ವರ್ಷದ ನಂತರ ಬಾಡಿಗೆಯನ್ನು ಸರ್ಕಾರಕ್ಕೆ ನೀಡಬೇಕು ಎಂದು ಷರತ್ತು ಹಾಕಲಾಗಿದೆ. ನಾವು ಎಲ್ಲದಕ್ಕೂ ವಿರೋಧ ಮಾಡಿದರೆ, ಜೆಎಸ್‌ಡಬ್ಲು ಬೃಹತ್ ಕಂಪನಿ ರಾಜ್ಯ ಬಿಟ್ಟು ಕೇರಳ, ತಮಿಳುನಾಡಿಗೆ ಹೋದರೆ ಏನು ಮಾಡೋಣ ಎಂದು ಪ್ರಶ್ನಿಸಿದರು.

ಹೊನ್ನಾವರ ಕಾಸರಕೋಡು ಬಂದರು ನಿರ್ಮಾಣಕ್ಕೆ 101 ಕುಟುಂಬಗಳ ಮನೆ, ಕೆಲವರ ಕಂಪೌAಡ್, ಕೆಲವರ ಎದುರಿನ ಜಾಗ ಸ್ವಾಽÃನ ಮಾಡಬೇಕಾಗುತ್ತದೆ ಎಂದು ಸರ್ವೇ ಮಾಡಲಾಗಿದೆ. ಅದರಲ್ಲಿ 20 ಜನರ ಹೆಸರಿನಲ್ಲಿ ಮಾತ್ರ ಪಟ್ಟಾ ಇದೆ. ಉಳಿದ 81 ಜನರ ಹೆಸರಿಗೆ ಜಾಗವಿಲ್ಲ. ಆದರೆ, ಎಲ್ಲ ಕುಟುಂಬದವರಿಗೂ ಸೂಕ್ತ ಪರಿಹಾರ ದೊರಕಿಸಿಕೊಡುವವರೆಗೆ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ.

ಮಂಕಾಳ ವೈದ್ಯ

ಜಿಲ್ಲಾ ಉಸ್ತುವಾರಿ ಸಚಿವ