ನಿನ್ನೆ ಕೋಲಾರ ತಾಲೂಕಿನ ಎಸ್ ಅಗ್ರಹಾರ ಕೆರೆ ವೀಕ್ಷಿಸಲು ಆಗಮಿಸಿದ್ದ ವೇಳೆ ಅಹವಾಲು ಸಲ್ಲಿಸಲು ಬಂದಿದ್ದ ರೈತ ಮಹಿಳೆಯರಿಗೆ ಕಾನೂನು ಸಚಿವ ಮಾಧುಸ್ವಾಮಿ ರಾಸ್ಕಲ್ ಎಂದು ಜರಿಯುವ ಮೂಲಕ ವಿವಾದ ಸೃಷ್ಟಿಸಿಕೊಂಡರು. ಕೆರೆಗಳ ಒತ್ತುವರಿಯನ್ನು ತೆರವು ಮಾಡಲು ಮಹಿಳೆಯರು ಮನವಿ ಮಾಡಿ ಚರ್ಚಿಸುವಾಗ ಹೇ ರಾಸ್ಕಲ್ ಮುಚ್ಚುಬಾಯಿ ಎಂಬ ಪದ ಪ್ರಯೋಗ ಮಾಡಿದ್ದು, ಈ ವೇಳೆ ಕೆರಳಿದ ಮಹಿಳೆಯರು ಮಾಧುಸ್ವಾಮಿ ಅವರಿಗೆ ಘೇರಾವ್ ಹಾಕಿದ ಪ್ರಸಂಗ ನಡೆಯಿತು.