ಜಿಲ್ಲೆ

ಉಸ್ತುವಾರಿ ಸಚಿವರಿಂದ ಕೃಷಿ ಮೇಳದ ಸಿದ್ಧತೆ ಪರಿಶೀಲನೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕೃಷಿ ವಿಶ್ವವಿದ್ಯಾಲಯ ಆಯೋಜಿಸುತ್ತಿರುವ ಕೃಷಿ ಮೇಳದ ಸಿದ್ಧತಾ ಕಾರ್ಯವನ್ನು ಉಸ್ತುವಾರಿ ಸಚಿವ ಲಾಡ್ ಸೋಮವಾರ ಪರಿಶೀಲಿಸಿದರು.

ವಿಶ್ವವಿದ್ಯಾಲಯ ಆವರಣದಲ್ಲಿ ಸಿದ್ಧಪಡಿಸಲಾಗುತ್ತಿರುವ ಕೃಷಿ ಮೇಳದ ಮುಖ್ಯ ವೇದಿಕೆ, ಮಳಿಗೆಗಳು, ವಾಹನಗಳ ಸಂಚಾರ, ನಿಲುಗಡೆ ವ್ಯವಸ್ಥೆಯ ಬಗ್ಗೆ ಸಚಿವ ಲಾಡ್ ಮಾಹಿತಿ ಪಡೆದುಕೊಂಡರು. ಲಕ್ಷಾಂತರ ರೈತರು ಸೇರುವ ಕೃಷಿ ಮೇಳದಲ್ಲಿ ಮೂಲ ಸೌಕರ್ಯ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿ.ಪಂ. ಸಿಇಒ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಗುಂಜನ್ ಆರ್ಯ, ವಿಶ್ವವಿದ್ಯಾಲಯದ ವಿವಿಧ ಅಧಿಕಾರಿಗಳು ಉಸ್ಥಿತರಿದ್ದರು.