ಜಿಲ್ಲೆ

ಗಾಯಾಳುಗಳನ್ನು ಭೇಟಿಯಾದ ಸಚಿವ ಲಾಡ್

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಕಲಘಟಗಿ ಪಟ್ಟಣದ ಹೊರ ವಲಯದಲ್ಲಿರುವ ತಡಸ್ ಕ್ರಾಸ್ ಬಳಿ ಲಾರಿ ಮತ್ತು ಟಾಟಾ ಏಸ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಬುಧವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.

ಗಾಯಾಳುಗಳ ಸಂಬಂಧಿಕರನ್ನು ಮಾತನಾಡಿಸಿದ ಸಚಿವ ಲಾಡ್, ಗಾಯಾಳುಗಳ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಅಪಘಾತವಾದ ಟಾಟಾ ಏಸ್​ನಲ್ಲಿ ಗಾರ್ವೆಂಟ್ಸ್ನಲ್ಲಿ ಕೆಲಸ ಮಾಡುವ ಮಹಿಳಾ ಕಾರ್ವಿುಕರು ಪ್ರಯಾಣಿಸುತ್ತಿದ್ದರು. ಒಬ್ಬರು ಮಹಿಳೆ ಮೃತಪಟ್ಟಿದ್ದು, 19 ಜನರಿಗೆ ಗಾಯವಾಗಿದೆ. ಟಾಟಾ ಏಸ್​ನಲ್ಲಿ 24 ಜನರಿದ್ದರು. ತಾರಿಹಾಳ ಬಳಿಯ ಗಾರ್ವೆಂಟ್ಸ್ನಲ್ಲಿ ಕೆಲಸ ಮಾಡುವ ಹೆಚ್ಚಿನವರು ಈ ಟಾಟಾ ಏಸ್​ನಲ್ಲಿದ್ದರು ಎಂದು ತಿಳಿಸಿದರು.

ಅಪಘಾತ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ರ್ಚಚಿಸಲಾಗುವುದು. ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದರು.

ಕಿಮ್ಸ್​ನಲ್ಲಿ ತ್ವರಿತ ಚಿಕಿತ್ಸೆ ಲಭಿಸದವರಿಗಾಗಿ ಒಂದು ವಾರದೊಳಗೆ ದೂರು ಪೆಟ್ಟಿಗೆ ಅಳವಡಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು. ಈ ಕುರಿತು ಸಂಬಂಧಿಸಿದ ಸಚಿವರೊಂದಿಗೂ ರ್ಚಚಿಸಲಾಗುವುದು ಎಂದು ತಿಳಿಸಿದರು.