ಜಿಲ್ಲೆ

ಚುನಾವಣಾ ರಾಜಕಾರಣಕ್ಕೆ ಗುಡ್​ಬೈ ಹೇಳ್ತಾರ ಕೆಎನ್ನಾರ್​!

ತುಮಕೂರು: ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ಹಾಗಂತ ಸಕ್ರೀಯ ರಾಜಕಾರಣದಿಂದ ನಿವೃತ್ತಿ ಪಡೆದಯುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್​. ರಾಜಣ್ಣ ಹೇಳಿದರು.

ಮಧುಗಿರಿ ಜಿಲ್ಲಾ ಕೇಂದ್ರ ಮಾಡುವ ನನ್ನ ಮಾತಿಗೆ ಬದ್ಧನಿದ್ದೇನೆ. ಮಧುಗಿರಿ ಬೆಟ್ಟಕ್ಕೆ ಕೇಬಲ್​ ಕಾರ್​ ಕೂಡ ಬರುತ್ತಿದೆ. ತುಮಕೂರು&ರಾಯದುರ್ಗ ರೈಲ್ವೆ ಕಾಮಗಾರಿ ಇನ್ನೊಂದು ವರ್ಷದಲ್ಲಿ ಮುಗಿಯಲಿದ್ದು ಎತ್ತಿನಹೊಳೆ ಯೋಜನೆ ನೀರು ಸಹ ಒಂದೂವರೆ ವರ್ಷದಲ್ಲಿ ನಮ್ಮ ತಾಲೂಕಿಗೆ ಬರಲಿದೆ. ಇಷ್ಟಾದ ಮೇಲೆ ನಾನು ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ. ಸ್ಪರ್ಧಿಸದಿದ್ದರು ಗೆಲ್ಲುವವರನ್ನು ಗೆಲ್ಲಿಸುತ್ತೇನೆ, ಸೋಲುವವರನ್ನು ಸೋಲಿಸುತ್ತೇನೆ ಎಂದು ಹೇಳುವ ಮೂಲಕ ರಾಜಕೀಯ ವಿರೋಧಿಗಳಿಗೆ ಪರೋಕ್ಷ$ವಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಟಾಂಗ್​ ಕೊಟ್ಟರು.

ಮುಂದಿನ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರ್ಥವಲ್ಲ. ಸಕ್ರೀಯ ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ ಎಂದು ಪುನರುಚ್ಚರಿಸಿದರು.