ಉಡುಪಿ: ಜಿಲ್ಲೆಯ ಬಿಜೆಪಿ ಹಿರಿಯ ನಾಯಕ ದಿ.ಸೋಮಶೇಖರ್ ಭಟ್ ಅವರ ಉಡುಪಿಯಲ್ಲಿರುವ ನಿವಾಸಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶನಿವಾರ ಸಂಜೆ ಭೇಟಿ ನೀಡಿದರು.
ಸೋಮಶೇಖರ್ ಭಟ್ ಅವರ ಭಾವಚಿತ್ರಕ್ಕೆ ನಮಸ್ಕರಿಸಿದ ಜೋಶಿ, ಅವರ ಪತ್ನಿ ಶಾರದಾ ಭಟ್, ಪುತ್ರರಾದ ಚಿತ್ತರಂಜನ್ ಭಟ್ ವಲ್ಲಭ ಭಟ್, ಸೊಸೆ ರಶ್ಮಿ ಸಿ. ಭಟ್, ಸೋಮಶೇಖರ ಅವರ ಸಹೋದರ ವಿಶ್ವನಾಥ ಭಟ್ ಮತ್ತು ಕುಟುಂಬದ ಸದಸ್ಯರೊಂದಿಗೆ ಕೆಲಸ ಸಮಯ ಕಳೆದರು.
ಗುಜ್ಜಾಡಿ ಪ್ರಭಾಕರ್ ನಾಯಕ್ ಅವರು ಸೋಮಶೇಖರ್ ಭಟ್ ಅವರ ಪಕ್ಷ ನಿಷ್ಠೆ, ಅವರ ಕಾಲಾವಧಿಲ್ಲಿ ಪಕ್ಷ ಸಂಘಟನೆ ಮಾಡಿದ ರೀತಿಯನ್ನು ಸಚಿವ ಜೋಶಿಗೆ ತಿಳಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್ ಕುಂದಾಪುರ, ಉದಯಕುಮಾರ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಇತರರಿದ್ದರು.