ಜಿಲ್ಲೆ

ತಳಮಟ್ಟದಿಂದ ಕಾಂಗ್ರೆಸ್ ಸಂಘಟನೆ ಅಗತ್ಯ :ಸಚಿವ ಸತೀಶ್ ಜಾರಕಿಹೊಳಿ

 ಚಿಂಚೋಳಿಯಲ್ಲಿ ಬ್ಲಾಕ್ ಸಮಿತಿಯಿಂದ ಲೋಕೋಪಯೋಗಿ ಸಚಿವರಿಗೆ ಸನ್ಮಾನ > ಪ್ರಿಯಾಂಕ್ ರಾಜೀನಾಮೆ ಅಗತ್ಯವಿಲ್ಲ

ವಿಜಯವಾಣಿ ಸುದ್ದಿಜಾಲ ಚಿಂಚೋಳಿ

ಮುಂಬರುವ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ತಳಮಟ್ಟದಿಂದ ಪಕ್ಷದ ಸಂಘಟನೆ ಮಾಡುವುದು ಅತಿ ಅಗತ್ಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಚಂದಾಪುರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಸಮಿತಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ರಾಜ್ಯ ಸರ್ಕಾರದ ಕಾರ್ಯಕ್ರಮ, ಸಾಧನೆ, ಗ್ಯಾರಂಟಿ ಯೋಜನೆಗಳ ಕುರಿತು ಮನೆ ಮನೆಗೆ ತೆರಳಿ ತಿಳಿವಳಿಕೆ ಮೂಡಿಸುವುದು ನಮ್ಮೆಲ್ಲರ ಸಂಕಲ್ಪವಾಗಬೇಕು ಎಂದರು.

ಕ್ಷೇತ್ರದಲ್ಲಿ ಅಲ್ಪ ಮತಗಳ ಅಂತರದಿAದ ಪಕ್ಷ ಸೋತಿದ್ದು, ಬರುವ ಚುನಾವಣೆಯಲ್ಲಿ ಗೆಲುವಿನ ಪತಾಕೆ ಹಾರಿಸುವ ನಿಟ್ಟಿನಲ್ಲಿ ಸಂಘಟನೆಗೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಕಾರ್ಯಕರ್ತರು, ಮುಖಂಡರು ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.

ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ ಮಾತನಾಡಿ, ಮೂಢನಂಬಿಕೆ ವಿರುದ್ಧ ಧ್ವನಿ ಎತ್ತುವ ನಾಯಕರಲ್ಲಿ ಸರಳತೆಯ ಸಾಹುಕಾರ ಜಾರಕಿಹೊಳಿ ಮೊದಲಿಗರು. ಆಕಸ್ಮಿಕವಾಗಿ ಕ್ಷೇತ್ರಕ್ಕೆ ಆಗಮಿಸಿದ್ದು ನಮ್ಮ ಸುದೈವ. ಪಕ್ಷದ ಸಂಘಟನೆಗೆ ಸಚಿವರ ಸಹಕಾರ ಅತಿ ಅವಶ್ಯಕವಾಗಿದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಆನಂದ ಟೈಗರ್, ಬಾಬು ಹೊನ್ನಾನಾಯಕ, ಲಕ್ಷö್ಮಣ ಆವುಂಟಿ, ಬಸವರಾಜ ಮಾಲಿ, ಸಂತೋಷ ಗುತ್ತೇದಾರ್, ಜಗನ್ನಾಥ ಇದಲಾಯಿ, ಅಬ್ದುಲ್ ಬಾಸೀದ್, ಜಗನ್ನಾಥ ಗುತ್ತೇದಾರ್, ಮಲ್ಲಿಕಾರ್ಜುನ ಬುಶೆಟ್ಟಿ, ಶರಣು ಪಾಟೀಲ್, ಕಾಶೀನಾಥ ಸಿಂಧೆ, ಅಜಿತ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್, ಸುರೇಶ ಭಂಟಾ, ರಾಮಶೆಟ್ಟಿ ಪವಾರ್, ಅನ್ವರ್ ಖತೀಬ್, ಜಗದೇವ ಗೌತಮ ಇತರರಿದ್ದರು.

ಪ್ರಿಯಾಂಕ್ ರಾಜೀನಾಮೆ ಅಗತ್ಯವಿಲ್ಲ

ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್ ಪಾಂಚಾಳ ಮನೆಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೋಗಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಇನ್ನು ಈ ವಿಷಯದಲ್ಲಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಪ್ರಕರಣವನ್ನು ಸಿಒಡಿಗೆ ಒಪ್ಪಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಇನ್ನು ಮೃತನ ಕುಟುಂಬದ ಜತೆ ಸರ್ಕಾರವಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹೊಸ ರಸ್ತೆ ನಿರ್ಮಾಣ, ದುರಸ್ತಿ ಇತರ ಅಭಿವೃದ್ಧಿ ಕಾರ್ಯಗಳಿಗಾಗಿ ಬಿಜೆಪಿ, ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ತಲಾ ೩೦-೪೦ ಕೋಟಿ ರೂ. ಅನುದಾನ ನೀಡಲಾಗಿದೆ. ಮೂರು ತಿಂಗಳಲ್ಲೇ ಎಸ್‌ಎಚ್‌ಡಿಪಿ, ಸಿಆರ್‌ಐಎಫ್ ಹೀಗೆ ವಿವಿಧ ಯೋಜನೆಗಳಡಿ ನೀಡಿದ ಅನುದಾನ ಬಗ್ಗೆ ಸ್ಥಳೀಯ ಶಾಸಕರನ್ನು ಕೇಳಿ ನೋಡಿ ಎಂದರು.

ಪ್ರವಾಸಿ ಮಂದಿರ ಶೀಘ್ರವೇ ಅನುಮೋದನೆ

ಚಿAಚೋಳಿ-ಕಲಬುರಗಿ ರಸ್ತೆ ಸುಧಾರಣೆ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು. ಕೆಲವೆಡೆ ಕಳಪೆ ಕೆಲಸದ ದೂರು ಬಂದಿದ್ದು, ಸರಿಪಡಿಸಲಾಗುತ್ತಿದೆ. ಕ್ಷೇತ್ರದಲ್ಲಿ ಪ್ರವಾಸಿ ಮಂದಿರದ ಬೇಡಿಕೆ ಇದ್ದು, ಶೀಘ್ರವೇ ಅನುಮೋದನೆ ನೀಡಲಾಗುವುದು.

| ಸತೀಶ್ ಜಾರಕಿಹೊಳಿ

ಲೋಕೋಪಯೋಗಿ ಸಚಿವ