ಜಿಲ್ಲೆ

ಕೆಲಸವಿಲ್ಲದೆ ಖಾಲಿ ಕುಳಿತಿರುವ ಮಾಜಿ ಶಾಸಕ ಸುರೇಶ್‌ಗೌಡ: ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

ಮಂಡ್ಯ: ಕೆಲಸ ಇಲ್ಲದೆ ಖಾಲಿ ಕೂತವರ ಮಾತುಗಳಿಗೆ ಉತ್ತರ ಕೊಡಲ್ಲ ಎಂದು ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ಸಚಿವರ ಬಗ್ಗೆ ಮಾತನಾಡಿದರೆ ದೊಡ್ಡ ಲೀಡರ್ ಆಗುತ್ತೇವೆಂದು ಮಾತನಾಡುತ್ತಿದ್ದಾರೆ. ಸುರೇಶ್‌ಗೌಡನ ಮಾತಿಗೆ ಬೆಲೆ, ಅದಕ್ಕಿಂತ ಅನರ್ಥ ಬೇರೆ ಇಲ್ಲ. ಮಾಡುವುದಕ್ಕೆ ಕೆಲಸ ಇಲ್ಲದೆ ಮಾತನಾಡುತ್ತಾರೆ. ಆದ್ದರಿಂದ ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆರೋಪಗಳನ್ನ ಒಪ್ಪಿಕೊಂಡಂತೆ ಎಂದು ಮಾತನಾಡಿಕೊಂಡರೂ ಪರವಾಗಿಲ್ಲ ಎಂದು ತಿರುಗೇಟು ನೀಡಿದರು.