ಜಿಲ್ಲೆ

ಸಚಿವರ ಮನೆಯಲ್ಲಿ ಪವರ್​ ಸ್ಟಾರ್​; ಪುನೀತ್ ರಾಜ್​ಕುಮಾರ್ ಕೈಯಲ್ಲಿ ಬೆಳ್ಳಿಗದೆ...

ಬಳ್ಳಾರಿ: ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್ ಅವರ ಕೈಗೆ ಈಗ ಬೆಳ್ಳಿ ಗದೆ ಏರಿದೆ. ಹಾಗಂತ ಅವರು ಯಾವುದೇ ಪೌರಾಣಿಕ ಸಿನಿಮಾದಲ್ಲಿ ಪಾತ್ರ ಮಾಡುತ್ತಿಲ್ಲ. ಅಷ್ಟಕ್ಕೂ ಅವರು ಹಿಡಿದಿರುವ ಗದೆ ರೀಲ್​ ಅಲ್ಲ, ರಿಯಲ್ಲೇ..!

ಇನ್ನೂ ವಿಶೇಷ ಎಂದರೆ ಈ ಬೆಳ್ಳಿ ಗದೆಯನ್ನು ಸಚಿವ ಆನಂದ್​ ಸಿಂಗ್ ಅವರು ನಟ ಪುನೀತ್ ರಾಜ್​ಕುಮಾರ್ ಅವರಿಗೆ ಕೊಡುಗೆಯಾಗಿ ನೀಡಿದ್ದಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿನ ತಮ್ಮ ನಿವಾಸಕ್ಕೆ ಪುನೀತ್ ಅವರನ್ನು ಆಹ್ವಾನಿಸಿಕೊಂಡ ಸಚಿವರು ಈ ಬೆಳ್ಳಿಗದೆಯನ್ನು ನೀಡಿ ಸನ್ಮಾನಿಸಿದ್ದಾರೆ.

'ಜೇಮ್ಸ್' ಸಿನಿಮಾದ ಶೂಟಿಂಗ್ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಗೆ ತೆರಳಿದ್ದ ಪುನೀತ್​ ಅವರಿಗೆ ಈ ಬೆಳ್ಳಿ ಗದೆ ಉಡುಗೊರೆಯಾಗಿ ಲಭಿಸಿದೆ. ಈ ಸಂದರ್ಭದಲ್ಲಿ ಮತ್ತೊಬ್ಬ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಕೂಡ ಉಪಸ್ಥಿತರಿದ್ದರು. ಈ ಹಿಂದೆ 'ದೊಡ್ಮನೆ ಹುಡುಗ' ಸಿನಿಮಾ ಶೂಟಿಂಗ್ ಸಂದರ್ಭದಲ್ಲೂ ಪುನೀತ್ ರಾಜ್​ಕುಮಾರ್ ಅವರನ್ನು ಸಚಿವ ಆನಂದ್ ಸಿಂಗ್ ಸನ್ಮಾನಿಸಿದ್ದರು.