ಸಿಂಧನೂರು ಎಪಿಎಂಸಿ ಸಭಾಂಗಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಸಭೆ ನಡೆಯಿತು. ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷರಾದ ರಾಮಯ್ಯ ಜವಳಗೇರಾ, ತಿಮ್ಮಣ್ಣ ಭೋವಿ, ಜಿಲ್ಲಾ ಸಂಚಾಲಕರಾದ ಧರ್ಮಣ್ಣ ಬನ್ನಿಗೋಳ, ಮಸ್ಕಿ ತಾಲೂಕು ಗೌರವ ಅಧ್ಯಕ್ಷ ಲಾಲಸಾಬ ನಾಡಗೌಡ ಇತರರಿದ್ದರು. 
ಜಿಲ್ಲೆ

ಕನಿಷ್ಠ ಬೆಂಬಲ ಬೆಲೆ ಸಿಗದೇ ರೈತ ಕಂಗಾಲು

ರುದ್ರಪ್ಪ ವಾಲಿ

ಸಿಂಧನೂರು: ಡಾಕ್ಟರ್ ಸ್ವಾಮಿನಾಥನ್ ಆಯೋಗದ ವರದಿ ಆಧರಿಸಿ ಬೆಲೆ ನೀತಿ ನಿಗದಿ ಮಾಡಬೇಕು ಎಂದು

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಅಧ್ಯಕ್ಷ ಶರಣಪ್ಪ ಮರಳಿ ಹೇಳಿದರು.

ನಗರದ ಎಪಿಎಂಸಿ ಸಭಾಂಗಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ಭತ್ತ, ಹತ್ತಿ, ತೊಗರಿ, ಜೋಳ ಇನ್ನಿತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಆದರೆ, ಕೃಷಿಗಾಗಿ ಸಾಲ ನೀಡಿದ ಬ್ಯಾಂಕ್ ಗಳು ಸಾಲ ವಸೂಲಿಗಾಗಿ ಕಾಟಾಚಾರಕ್ಕೆ ಅದಾಲತ್ ನಡೆಸಿ ಕೋರ್ಟ್‌ನಲ್ಲಿ ದಾವೆ ಹೂಡಿ ರೈತರನ್ನು ಆತ್ಮ ಹತ್ಯೆ ಹಾದಿ ಹಿಡಿಯುವಂತೆ ಮಾಡುತ್ತಿವೆ. ರೈತರ ಆತ್ಮಹತ್ಯೆ ತಡೆ ಹಿಡಿಯಲು ಉತ್ಪನ್ನಗಳಿಗೆ ಸ್ವಾಮಿನಾಥನ್ ಆಯೋಗದ ವರದಿ ಆಧರಿಸಿ ಬೆಲೆ ನೀತಿ ನಿಗದಿ ಮಾಡದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾತ್ಕಾಲಿಕ, ತಮಗೆ ಕಮಿಷನ್ ಬರುವ ಕೃಷಿ ಇಲಾಖೆಗಳಲ್ಲಿ ಸಬ್ಸಿಡಿ ಯಂತ್ರೋಪಕರಣಗಳು, ಬೀಜಗಳು, ರಾಸಾಯನಿಕ ಕ್ರಿಮಿನಾಶಕಗಳನ್ನು ಕೊಡುತ್ತಿವೆ ಎಂದು ದೂರಿದರು.

ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡದಂತೆ ವರ್ತಕರಿಗೆ ಕಠಿಣ ಕಾನೂನು ಜಾರಿಗೊಳಿಸಬೇಕು. ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಲಾಯಿತು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರವಿಚಂದ್ರ, ರೈತ ಸಂಘದ ಜಿಲ್ಲಾ ಮಾನಯ್ಯ ಅಂಕುಶದೊಡ್ಡಿ, ಜಿಲ್ಲಾ ಕೋಶ್ಯಾಧ್ಯಕ್ಷ ನರಿಯಪ್ಪ ಪೂಜಾರಿ. ಸಿಂಧನೂರು ತಾಲೂಕು ಅಧ್ಯಕ್ಷ ಬೀರಲಿಂಗಯ್ಯ ಚಿತ್ರಾಲಿ, ಮಸ್ಕಿ ತಾಲೂಕು ಅಧ್ಯಕ್ಷ ವೆಂಕಟೇಶ ರತ್ನಾಪುರ ಹಟ್ಟಿ, ಮಾನವಿ ತಾಲೂಕು ಅಧ್ಯಕ್ಷ ಶಿವರಾಜ ಆಲ್ದಾಳ, ಪಾರಯ್ಯಸ್ವಾಮಿ, ಹನುಮಂತ ಬೂದಿವಾಳ, ಶರಣಪ್ಪ ಪಟೇಲ್, ವಜ್ರಪ್ಪ ರತ್ನಾಪುರಹಟ್ಟಿ, ಬಸನಗೌಡ ಚಿತ್ರಾಲಿ, ನರಸಿಂಹರಾವ, ಬಾಲಯ್ಯಕ್ಯಾಂಪ್ ಇದ್ದರು.