ನಂಜನಗೂಡು ಸಮೀಪದ ಹೊಸಹಳ್ಳಿ ಗೇಟ್ ಬಳಿ ಡಿವೈಡರ್ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಮಿನಿ ಬಸ್. 
ಜಿಲ್ಲೆ

ರಸ್ತೆ ಡಿವೈಡರ್‌ಗೆ ಮಿನಿಬಸ್ ಡಿಕ್ಕಿ

ರವಿಕುಮಾರ್ ಪಿ. ಕೆ

ನಂಜನಗೂಡು: ತಾಲೂಕಿನ ಹೊಸಹಳ್ಳಿ ಗೇಟ್ ಬಳಿ ಶುಕ್ರವಾರ ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ ರಸ್ತೆ ವಿಭಜಕಕ್ಕೆ ಗುದ್ದಿ ಪಲ್ಟಿಯಾಯಿತು. ಪರಿಣಾಮ 17 ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.

ಕೇರಳದ ಶ್ರೀ ಶಬರಿಮಲೆಗೆ ತೆರಳಿದ್ದ ಬೆಂಗಳೂರಿನ ನಿವಾಸಿಗಳು ಅಯ್ಯಪ್ಪಸ್ವಾಮಿ ದರ್ಶನ ದರ್ಶನ ಪಡೆದು ವಾಪಸ್ ಆಗುತ್ತಿದ್ದಾಗ ಅವಘಡ ಸಂಭವಿಸಿದೆ. ಚಾಲಕ ಅತಿ ವೇಗವಾಗಿ ಮಿನಿಬಸ್ ಚಾಲನೆ ಮಾಡಿದ್ದೆ ಈ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಈ ಮಿನಿಬಸ್‌ನಲ್ಲಿ 6 ಮಕ್ಕಳು, ಮೂವರು ಮಹಿಳೆಯರು ಸೇರಿದಂತೆ ಒಟ್ಟು 21 ಜನ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ. ಪಲ್ಟಿ ಆದ ರಭಸಕ್ಕೆ ಮಿನಿ ಬಸ್‌ನಲ್ಲಿದ್ದ 17 ಜನಕ್ಕೆ ಗಂಭೀರ ಗಾಯಗಳಾಗಿದ್ದು, ನಂಜನಗೂಡಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ನಂಜನಗೂಡಿನ ಸಂಚಾರ ಠಾಣೆಯ ಪಿಎಸ್‌ಐ ಸಿದ್ದರಾಜು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂಜನಗೂಡಿನ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.