ಜಿಲ್ಲೆ

ಸೆ.13ರಂದು ಮಿನಿ ಉದ್ಯೋಗ ಮೇಳ: ಐದಕ್ಕೂ ಹೆಚ್ಚು ಕಂಪನಿ ಭಾಗಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಎಸ್‌ಬಿಐ ಕಾರ್ಡ್, ಕೊಡಚಾದ್ರಿ ಚಿಟ್ಸ್ ಪ್ರೈ ಲಿಮಿಟೆಡ್, ಇನ್ನೋವೇಟಿವ್ ಬ್ರಿಡ್ಜ್ ಆಫ್ ಎಚ್‌ಆರ್ ಸರ್ವೀಸಸ್, ರಾಂಡ್‌ಸ್ಟಾಡ್, ಎಚ್‌ಡಿಎಫ್‌ಸಿ ಭರತ್ ಪ್ರೈ ಲಿಮಿಟೆಡ್, ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್ ಪ್ರೈ ಲಿಮಿಟೆಡ್ ಸಹಯೋಗದಲ್ಲಿ ಸೆ.13ರಂದು ನಗರದಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಎಸ್‌ಎಸ್‌ಎಲ್ಸಿ, ಪಿಯುಸಿ, ಐಟಿಐ ಹಾಗೂ ಯಾವುದೇ ಪದವಿ ಉತ್ತೀರ್ಣರಾದ 18 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ತಮ್ಮ ಸ್ವವಿವರೊಂದಿಗೆ ಅಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಆರ್‌ಟಿಒ ಕಚೇರಿ ಎದುರು, ಮಂಡ್ಯ ಇಲ್ಲಿ ನಡೆಯುವ ಮೇಳದಲ್ಲಿ ಭಾಗವಹಿಸಬಹುದು. ಮಾಹಿತಿಗೆ ದೂ.ಸಂ 08232-295124 ಮತ್ತು ಮೊ.ಸಂ 9164642684, 8660061488 ಅಥವಾ 8970646629 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.