ಜಿಲ್ಲೆ

ಜೂ.7ರಂದು ನಗರದಲ್ಲಿ ಮಿನಿ ಉದ್ಯೋಗ ಮೇಳ: ಐದು ಖಾಸಗಿ ಸಂಸ್ಥೆಗಳು ಭಾಗಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮೆ.ಗ್ರಾಸಿಂ ಇಂಡಸ್ಟ್ರೀಸ್, ಆದಿತ್ಯಾ ಬಿರ್ಲಾ ಗ್ರೂಪ್, ಮೆ.ಟೊಯೋಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ, ಬಂಧನ್ ಬ್ಯಾಂಕ್ ಲಿಮಿಟೆಡ್ ಮತ್ತು ಮೆ.ಶಾಹಿ ಎಕ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸಹಭಾಗಿತ್ವದಲ್ಲಿ ಜೂ.7ರಂದು ನಗರದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗಮೇಳ ಏರ್ಪಡಿಸಲಾಗಿದೆ.

ಪಿ.ಯು.ಸಿ, ಐ.ಟಿ.ಐ(ಯಾವುದೇ ಟ್ರೇಡ್), ಡಿಪ್ಲೊಮೋ(ಪ್ಯಾರಾಮೆಡಿಕಲ್, ಆಟೋಮೊಬೈಲ್, ಫಿಟ್ಟರ್, ಟರ್ನರ್ ಮೆಕ್ಯಾನಿಕಲ್) ಹಾಗೂ ಯಾವುದೇ ಪದವಿ/ಯು.ಜಿ ಉತ್ತೀರ್ಣರಾದ 18 ರಿಂದ 32 ವಷರ್ದೊಳಗಿನ ಆಸಕ್ತ ಅಭ್ಯರ್ಥಿಗಳು ಅಂದು ಬೆಳಗ್ಗೆ 10.30ಕ್ಕೆ ತಮ್ಮ ಬಯೋಡೇಟದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಮಾಹಿತಿಗೆ ದೂ.ಸಂ 08232-295124, ಮೊ.ಸಂ 8660061488 ಮತ್ತು 9164642684 ಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.