ಕವಿತಾಳದ ಕಲ್ಮಠದಲ್ಲಿ ಯೋಗ ದಿನ ನಿಮಿತ್ತ ಸಾರ್ವಜನಿಕರು ಯೋಗ ಮಾಡಿದರು. 
ಜಿಲ್ಲೆ

ಮನಶಾಂತಿಗೆ ಯೋಗ ಅಗತ್ಯ

ಕವಿತಾಳ: ಪಟ್ಟಣದ ಕಲ್ಮಠದಲ್ಲಿ ಶನಿವಾರ ವಿಶ್ವ ಯೋಗ ದಿನ ಆಚಾರಿಸಲಾಯಿತು.

ಬಾಗಲವಾಡ ಪಿರಮಿಡ್ ಧ್ಯಾನ ಕೇಂದ್ರದ ಮಾತಾ ಸಾವಿತ್ರಿ ಮಾತನಾಡಿ, ಮನಸ್ಸಿನ ಗೊಂದಲ ನಿವಾರಣೆಗೆ ಯೋಗ ಅಗತ್ಯ. ಅದೇ ರೀತಿ ಮೌನವಾಗಿ ಧ್ಯಾನ ಮಾಡಬೇಕು. ಯೋಗದಿಂದ ರೋಗಗಳು ದೂರವಾಗುತ್ತವೆ ಎಂದರು.

ಯೋಗಾಸನ ಸಿದ್ಧ ಸಮಾಧಿ ಯೋಗದ ಗುರು ಮಹೇಶ ಗುರೂಜಿ ಲಿಂಗಸಗೂರು ನಡೆಸಿಕೊಟ್ಟರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಸಿ ನೆಡಲಾಯಿತು. ಪ್ರಮುಖರಾದ ವೀರನಗೌಡ ಹಣಗಿ, ಡಾ.ರಾಮಕೃಷ್ಣ, ಸಂಜಿವಕುಮಾರ, ರಾಜ್ ಯಾದವ, ಭೀರಪ್ಪ ಹೀರಾ, ರಾಘವೇಂದ್ರ ಶೆಟ್ಟಿ ಇತರರಿದ್ದರು.